Belagavi

ಜನಸೇವಕ ಸಮಾವೇಶ ರದ್ದು ಮಾಡದಿದ್ದರೆ ಹೈಕೋರ್ಟ್‍ನಲ್ಲಿ ಪಿಲ್: ಭೀಮಪ್ಪ ಗಡಾದ ಖಡಕ್ ಎಚ್ಚರಿಕೆ

Share

ಸರ್ಕಾರ ಸಾಮಾನ್ಯರಿಗೊಂದು, ರಾಜಕಾರಣಿಗಳಿಗೆ ಇನ್ನೊಂದು ಕಾನೂನು ಜಾರಿ ಮಾಡಲು ಹೊರಟಿದೆ. ಬೆಳಗಾವಿಯಲ್ಲಿ ಜನವರಿ 17ರಂದು 3-5 ಲಕ್ಷ ಜನ ಸೇರಿಸಿ ಬಿಜೆಪಿ ಹಮ್ಮಿಕೊಂಡಿರುವ ಜನಸೇವಕ ಸಮಾವೇಶವನ್ನು ರದ್ದು ಮಾಡಬೇಕು ಇಲ್ಲವೇ ಕೋವಿಡ್ ಮಾರ್ಗಸೂಚಿ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಷಕ್ಷ ಭೀಮಪ್ಪ ಗಡಾದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮಧ್ಯಾಹ್ನ ಆಗಮಿಸಿದ್ದ ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ, ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಷಕ್ಷ ಭೀಮಪ್ಪ ಗಡಾದ ಮನವಿ ಸಲ್ಲಿಸಿ, ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿ ಸರ್ಕಾರ ಜಾತ್ರೆ, ಹಬ್ಬ, ಉತ್ಸವ, ಸಂತೆ ರದ್ದುಗೊಳಿಸಿದೆ. ಆದರೆ ರಾಜ್ಯದ ಬಿಜೆಪಿ ಬೆಳಗಾವಿಯಲ್ಲಿ ಜನವರಿ 17ರಂದು 3-5 ಲಕ್ಷ ಜನ ಸೇರಿಸಿ ಜನಸೇವಕ ಸಮಾವೇಶ ಹಮ್ಮಿಕೊಂಡಿದೆ. ಜಾತ್ರೆ, ಈ ಸಮಾವೇಶವನ್ನು ರದ್ದು ಮಾಡಬೇಕು ಇಲ್ಲವೇ ಕೋವಿಡ್ ಮಾರ್ಗಸೂಚಿ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು. ಇದೇ ವೇಳೆ ಅವರು ನಿಪ್ಪಾಣಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ರಾಜಕೀಯ ಸಮಾವೇಶ ನಡೆಸಿರುವ ವಿರುದ್ಧ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆಗಳ ದಾಖಲೆಗಳನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.

ಈ ವೇಳೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ಪಾಲ್ಗೊಳ್ಳುವ ಜನಸೇವಕ ಸಮಾವೇಶದಲ್ಲಿ 3-4 ಲಕ್ಷ ಜನ ಸೇರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಇದು ಕೋವಿಡ್ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ದೇಶದಲ್ಲಿ ಮೋದಿ, ಅಮಿತ್ ಶಾ ಅವರಿಗೊಂದು, ಕೃಷಿ ಕೂಲಿ ಮಾಡುವ ಮಹಿಳೆಯರು, ಕಸ ಗೂಡಿಸುವ ಮಾಲಿಗಳಿಗೆ ಮತ್ತೊಂದು ಕಾನೂನು ಇಲ್ಲ. ಇಷ್ಟೊಂದು ಜನರನ್ನು ಸೇರಿಸಿ ಸಮಾವೇಶ ನಡೆಸುವುದು ಕೋವಿಡ್ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸಮಾವೇಶ ರದ್ದು ಮಾಡಬೇಕು ಇಲ್ಲವೇ ಕೋವಿಡ್ ಮಾರ್ಗಸೂಚಿ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಒಟ್ಟಿನಲ್ಲಿ ಜನಸಾಮಾನ್ಯರಿಗೊಂದು, ರಾಜಕಾರಣಿಗೊಂದು ಕಾನೂನು ಜಾರಿ ಮಾಡಲು ಹೊರಟಿದೆ. ಕೂಡಲೇ ಬೃಹತ್ ಸಮಾವೇಶ ರದ್ದುಗೊಳಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಕೆ ರವಾನಿಸಿದರು. ಜಿಲ್ಲಾಧಿಕಾರಿ ಮನವಿ ಪತ್ರ ಸ್ವೀಕರಿಸಿ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Tags:

error: Content is protected !!