Belagavi

ಜನಸೇವಕ ಸಮಾವೇಶ ಬಳಿಕ ಕಾರ್ಯಕರ್ತರೊಂದಿಗೆ ಬಿಜೆಪಿ ಚಾಣಕ್ಯನ ಮಿಟಿಂಗ್..ಡಿಸಿಎಂ ಲಕ್ಷ್ಮಣ ಸವದಿ

Share

ಜನಸೇವಕ ಸಮಾವೇಶವಕ್ಕೆ ಭಾಗಿಯಾಗಲು ಬೆಳಗಾವಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಮಾವೇಶಕ್ಕೂ ಮೊದಲು ಇತ್ತಿಚೆಗೆ ಅಗಲಿದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಅದೇ ರೀತಿ ಇತ್ತಿಚೆಗೆ ಅಗಲಿದ ಬಿಜೆಪಿ ಕಾರ್ಯಕರ್ತರಾದ ಹಿರೇಮಠ ಹಾಗೂ ರಾಜು ಚಿಕ್ಕನಗೌಡರ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮಾಹಿತಿ ನೀಡಿದರು.

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಕೇಂದ್ರ ಸಚಿವ ಅಮಿತ್ ಶಾ ಕೂಡ ಆಗಮಿಸಿದ್ದಾರೆ. ಈ ಸಂಬಂಧ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಆಗಮಿಸಿದ್ದಾರೆ. ಈಗ ಬಾಗಲಕೋಟೆಯಲ್ಲಿ ಇಥಿನಾಲ್ ಘಟಕ ಉದ್ಘಾಟನೆ ಮುಗಿಸಿ ಬೆಳಗಾವಿಗೆ ಆಗಮಿಸಲಿದ್ದಾರೆ. ಇದೇ ವೇಳೆ ಭೋಜನದ ಆದ ನಂತರ 3 ಗಂಟೆಗೆ ಸರ್ಕಿಟ್ ಹೌಸ್‍ನಿಂದ ನೇರವಾಗಿ ದಿ.ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಇದಾದ ಬಳಿಕ ಇತ್ತಿಚೆಗೆ ಅಗಲಿದ ಬಿಜೆಪಿ ಕಾರ್ಯಕರ್ತರಾದ ಹಿರೇಮಠ ಹಾಗೂ ರಾಜು ಚಿಕ್ಕನಗೌಡರ ಮನೆಗಳಿಗೆ ತೆರಳಿ ಅವರ ಕುಟುಂಬಸ್ಥರಿಗೂ ಅಮಿತ್ ಶಾ ಅವರು ಸಾಂತ್ವನ ಹೇಳಲಿದ್ದಾರೆ. ಇದಾದ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜನಸೇವಕ ಸಮಾವೇಶ ಮುಗಿದ ನಂತರ ಕೆಎಲ್‍ಇಯಲ್ಲಿ ಶತಮಾನೋತ್ಸವ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ. ನಂತರ ಜೀರಿಗಿ ಹಾಲ್‍ನಲ್ಲಿ ಜಿಲ್ಲೆಯ ಪ್ರಮುಖ ಕಾರ್ಯಕರ್ತರು, ಶಾಸಕರು, ಮಂತ್ರಿಗಳ ಸಭೆ ಆಯೋಜಿಸಲಾಗಿದೆ. ಸಭೆ ಮುಗಿದ ಬಳಿಕ ಅಮಿತ್ ಷಾ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೆಚ್ಚಿನ ಮಾಹಿತಿ ನೀಡಿದರು.

ಇನ್ನು ಇಡೀ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರು ಆಯ್ಕೆಯಾಗಿರುವ ಉದ್ದೇಶದಿಂದ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಇಡೀ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಆಯ್ಕೆಯಾದ ಹಿನ್ನೆಲೆ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ನಮ್ಮ ಮನವಿ ಮೇರೆಗೆ ಅಮಿತ್ ಷಾ ಆಗಮಿಸಿದ್ದಾರೆ. ಇನ್ನು ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೂ ಕೂಡ ಅಭಿನಂದನೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮುಂದಿನ ಚುನಾವಣೆ, ಪಕ್ಷ ಸಂಘಟನೆ, ಮುಂದಿನ ಭವಿಷ್ಯದ ಎಲ್ಲಾ ಚಟುವಟಿಕೆಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

 

Tags:

error: Content is protected !!