Belagavi

ಕೃಷಿ ಕಾಯ್ದೆ ಚರ್ಚೆಗೆ ಬನ್ನಿ, ಇಲ್ಲವೇ ಪ್ರತಿಭಟನೆ ಎದುರಿಸಿ: ಅಮಿತ್ ಶಾಗೆ ರೈತ ಸಂಘ, ಹಸಿರು ಸೇನೆ ಪಂಥಾಹ್ವಾನ

Share

ದೆಹಲಿಯಲ್ಲಿ ರೈತರು 60 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ತಯಾರಿಲ್ಲ. ಹೀಗಾಗಿ ಜನವರಿ 17ರಂದು ಬೆಳಗಾವಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತರೊಂದಿಗೆ ಚರ್ಚೆಗೆ ಬರಬೇಕು. ಇಲ್ಲವಾದರೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಅಂದು ಪ್ರತಿಭಟನೆ ನಡೆಸಲಾಗುವುದು, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಎಚ್ಚರಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಕೇಂದ್ರದ ಕೃಷಿ ನೀತಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು 60 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ರೈತತ ಹಿತಾಸಕ್ತಿ ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಆದರೂ ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ಧವಿಲ್ಲ. ಬೆಳಗಾವಿಗೆ ಜನವರಿ 17ರಂದು ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರೈತರೊಂದಿಗೆ ಚರ್ಚೆಗೆ ಬರಬೇಕು ಎಂದು ಆಹ್ವಾನಿಸುತ್ತಿದ್ದೇವೆ. ಕೇಂದ್ರ ಸರ್ಕಾರ ನಿಲುವು ಪ್ರಕಟಿಸದಿದ್ದರೆ ರೈತರು ರಾಜ್ಯಾದ್ಯಂತ ಉಗ್ರ ಚಳವಳಿ ಹಮ್ಮಿಕೊಳ್ಳುವುದು ನಿಶ್ಚಿತ ಎಂದರು.

ಈ ವೇಳೆ ರೈತ ಮುಖಂಡರಾದ ರಾಘವೇಂದ್ರ ನಾಯ್ಕ, ಜಯಶ್ರೀ ಗುರನ್ನವರ, ಪ್ರಕಾಶ ನಾಯ್ಕ ಮತ್ತಿತರರು ಇದ್ದರು.

Tags:

error: Content is protected !!