Belagavi

ಕನ್ನಡ ಸಾಹಿತ್ಯದ ಸವಿ ಉಣಿಸಿದ ಜಿಲ್ಲಾ ಕಸಾಪದ ದತ್ತಿ ಕಾರ್ಯಕ್ರಮ

Share

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ನೆಹರೂ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಕನ್ನಡಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವಿವಿಧ ದತ್ತಿ ಕಾರ್ಯಕ್ರಮಗಳಲ್ಲಿ ವಿಷಯ ತಜ್ಞರು ಉಪನ್ಯಾಸ ಪ್ರಸ್ತುತಪಡಿಸಿದರು.

ಈ ವೇಳೆ ಎಸ್.ವಿ.ಬಾಗಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರು ಮತ್ತು ವಚನ ಸಾಹಿತ್ಯ ವಿಷಯವಾಗಿ ನಿವೃತ್ತ ಶಿಕ್ಷಕಿ ಅಕ್ಕಮಹಾದೇವಿ ತೆಗ್ಗಿ ಮಾತನಾಡಿ, ಶರಣರು ಮತ್ತು ವಚನ ಸಾಹಿತ್ಯ ಬೇರೆ ಬೇರೆ ಅಲ್ಲ. ವಚನ ಸಾಹಿತ್ಯ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ರಚನೆಯಾದ ಸಾಹಿತ್ಯವಾಗಿದೆ. ವಚನಗಳ ಮೂಲಕ ಉತ್ತಮ ಜೀವನದ ಸಂದೇಶ ನೀಡಿದ ಶರಣರು, ವ್ಯಕ್ತಿಯ ವಿಕಾಸಕ್ಕೆ ಹಲವು ಅನುಭವ ನುಡಿಗಳನ್ನು ಹೇಳಿ ಹೋಗಿದ್ದಾರೆ. ಅವು ಸಾರ್ವಜನಿಕ ಸತ್ಯವಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಡಾ.ಸ.ಜ.ನಾಗಲೋಟಿಮಠ ದತ್ತಿ ಕಾರ್ಯಕ್ರಮದಲ್ಲಿ ಪ್ರೊ.ಸಿ.ಜಿ.ಮಠಪತಿ ಉಪನ್ಯಾಸ, ಜ್ಯೋತಿ ಮೂಗಿ ದತ್ತಿ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ನೋವು ನಲಿವಿನ ಹಾಡುಗಳು, ಡಾ.ಬೆಟಗೇರಿ ಕೃಷ್ಣಶರ್ಮ ದತ್ತಿ ಕಾರ್ಯಕ್ರಮದಲ್ಲಿ ಕೃಷ್ಣಶರ್ಮ ರಚಿತ ಗೀತೆಗಳ ಗಾಯನ ಮರಿಮಲ್ಲಪ್ಪ ರುದ್ರಪ್ಪ ಮಲಶೆಟ್ಟಿ ದತ್ತಿ ಕಾರ್ಯಕ್ರಮದಲ್ಲಿ ಗೀಗೀ ಪದ ಮತ್ತು ಜಾನಪದ ಸಂಗೀತ ಸುಧೆ, ನೇಮಿನಾಥ ಕಲ್ಲಪ್ಪ ಇಂಚಲ ದತ್ತಿ ಕಾರ್ಯಕ್ರಮದಲ್ಲಿ ಭಾವಗೀತೆಗಳ ಗಾಯನ ಸ್ಪರ್ಧೆ, ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆದವು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಸುನೀತಾ ಮೂಗಿ, ಶಾಂತಕ್ಕ ನಾಗಲೋಟಿಮಠ ಮುಖ್ಯ ಅತಿಥಿಗಳಾಗಿದ್ದರು.
ಎಂ.ವೈ.ಮೆಣಸಿನಕಾಯಿ, ಜ್ಯೋತಿ ಬಾದಾಮಿ, ಸಾಹಿತಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Tags:

error: Content is protected !!