Belagavi

ಕನ್ನಡ ಧ್ವಜ ತೆರವಿಗೆ ಗಡುವು ನೀಡಿದವರು ಮಹಾರಾಷ್ಟ್ರಕ್ಕೆ ಹೋಗಲಿ: ಡಿಸಿಎಂ ಲಕ್ಷ್ಮಣ ಸವದಿ

Share

ಬೆಳಗಾವಿ ಮಹಾನಗರ ಪಾಲಿಕೆ ಆವರಣದ ಕನ್ನಡ ಧ್ವಜ ತೆರವಿಗೆ ಎಂಇಎಸ್ ನೀಡಿರುವ ಜನವರಿ 21ರ ಗಡುವಿನ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸಲು ಯಾರ ಅಪ್ಪಣೆ ಬೇಕು? ಯಾವುದೇ ಉದ್ಧಟತನ ಸಹಿಸುವುದಿಲ್ಲ. ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಮಹಾನಗರ ಪಾಲಿಕೆ ಆವರಣದಲ್ಲಿ ಹಾರಿಸಲಾಗಿರುವ ಕನ್ನಡ ಧ್ವಜ ತೆರವಿಗೆ ಜನವರಿ 21ರ ಗಡುವು ನೀಡಿರುವ ಎಂಇಎಸ್ ಹೇಳಿಕೆ ಕಾನೂನು ವ್ಯಾಪ್ತಿಗೆ ಮೀರಿದ್ದು. ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸಿದ್ದರೆ ತಪ್ಪೇನೂ ಇಲ್ಲ. ಎಂಇಎಸ್ ಮುಖಂಡರು ಇಂತಹ ಹೇಳಿಕೆಗಳನ್ನು ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಿ ನೀಡಲಿ. ಯಾವುದೇ ಉದ್ಧಟತನ ಸಹಿಸುವುದಿಲ್ಲ. ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಗೆ ಪಕ್ಷ ಆಧರಿತ ಚುನಾವಣೆ ನಡೆದಿಲ್ಲ. ಇಲ್ಲಿಯವರೆಗೆ ಏನಿದ್ದರೂ ಎಂಇಎಸ್ ಮತ್ತು ಕನ್ನಡಪರ ಒಕ್ಕೂಟಗಳ ನಡುವಿನ ಹಣಾಹಣಿಯಾಗಿದೆ. ಚುನಾವಣೆ ಘೋಷಣೆಯಾಗಲಿ. ನೋಡೋಣ ಎಂದರು.

ಇನ್ನು ರಾಜ್ಯದಲ್ಲಿ ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

Tags:

error: Content is protected !!