Belagavi

ಕಣಬರಗಿ ಸ್ಕೀಮ್ ನಂ.61..ಪ್ಲಾಟ್ ಹಂಚಿಕೆಗೆ ಬುಡಾಗೆ ಕಣಬರಗಿ ರೈತರಿಂದ 21 ದಿನಗಳ ಗಡುವು

Share

ಕಣಬರಗಿ ಸ್ಕೀಮ್ ನಂ.61ರ ಲೇಔಟ್ ನಿರ್ಮಾಣ ಕೆಲಸ ಆರಂಭವಾಗಿ 14 ವರ್ಷಗಳು ಕಳೆದಿವೆ ಆದ್ರೂ ಕೂಡ ಇದುವರೆಗೂ ಪ್ಲಾಟ್‍ಗಳನ್ನು ಹಂಚುವ ಕೆಲಸ ಬುಡಾ ಅಧಿಕಾರಿಗಳು ಮಾಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಕಣಬರಗಿ ರೈತರು ಪ್ರತಿಭಟನೆ ನಡೆಸಿದರು. ಅಲ್ಲದೇ ಅವರ ಸಮಸ್ಯೆ ಇತ್ಯರ್ಥ ಪಡಿಸಲು 21 ದಿನಗಳ ಗಡುವು ಕೂಡ ನೀಡಿದ್ದಾರೆ.

ಸೋಮವಾರ ಈ ಸಂಬಂಧ ಬೆಳಗಾವಿ ಬುಡಾ ಕಚೇರಿಗೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಣಬರಗಿ ರೈತರು ಬುಡಾ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹೌದು ಕಣಬರಗಿ ಗ್ರಾಮದಲ್ಲಿ ಸ್ಕೀಮ್ ನಂ.61ರಡಿ ಲೇಔಟ್ ನಿರ್ಮಾಣ ಮಾಡಲು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ 2006-2007ರಲ್ಲಿಯೇ ಕೆಲಸ ಆರಂಭಿಸಿದೆ.

ಆದ್ರೆ ಈಗ 2021ಕ್ಕೆ ಕಾಲಿಟ್ಟರೂ ಕೂಡ ಪ್ಲಾಟ್‍ಗಳ ಹಂಚಿಕೆ ಆಗಿಲ್ಲ. ಬುಡಾ ಅಧಿಕಾರಿಗಳ ವಿಳಂಬ ನೀತಿ ಖಂಡಿಸಿ ಕಣಬರಗಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೇ ಈ ಸಮಸ್ಯೆ ಇತ್ಯರ್ಥ ಪಡಿಸಲು 21 ದಿನಗಳ ಕಾಲ ಗಡುವು ನೀಡಿದ್ದಾರೆ. ಈ ವೇಳೆ ಮಾತನಾಡಿದ ಕಣಬರಗಿ ರೈತ ಸಿದ್ರಾಯಿ ಶೀಗಿಹಳ್ಳಿ ಮಾತನಾಡಿ 14 ವರ್ಷಗಳಿಂದ ನಮಗೆ ಅನ್ಯಾಯವಾಗಿದೆ. 14 ವರ್ಷದ ನಷ್ಟ ಪರಿಹಾರ ನೀಡಬೇಕು. 50:50ರ ಅನುಪಾತದಲ್ಲಿ ನಿವೇಶನ ತಕ್ಷಣವೇ ನೀಡಬೇಕು. ನಮ್ಮ ಬೇಡಿಕೆ ಈಡೇರಿಸಲು 21 ದಿನಗಳ ಗಡುವು ನೀಡಿದ್ದೇವೆ. ಇಷ್ಟರೊಳಗೆ ಮಾಡದಿದ್ರೆ, ಬುಡಾ ಕಚೇರಿಗೆ ಬೀಗ ಜಡಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ನಂತರ ಇನ್ನೊರ್ವ ರೈತ ಬಾಳಗೌಡ ಪಾಟೀಲ್ ಮಾತನಾಡಿ 2006 ಮತ್ತು 2007ರಲ್ಲಿ ನಿಮಗೆ ಬಹಳ ಲಾಭ ಆಗುತ್ತದೆ ಎಂದು ನಮಗೆ ಆಸೆ ಹುಟ್ಟಿಸಿ ನಮ್ಮ ಜಮೀನು ತೆಗೆದುಕೊಂಡಿದ್ದಾರೆ.

ಈ ಸ್ಕೀಮ್‍ನಲ್ಲಿ ಅಧಿಕಾರಿಗಳಿಗೆ ಹಣ ಸಿಗೋದಿಲ್ಲ ಎಂದು ವಿಳಂಬ ಮಾಡುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ತುರ್ತಾಗಿ ನಮಗೆ ಸಿಗಬೇಕಿರುವ ಪ್ಲಾಟ್‍ಗಳನ್ನು ನಮಗೆ ನೀಡಬೇಕು ಎಂದು ಆಗ್ರಹಿಸಿದರು.
ಒಟ್ಟಾರೆ ಬುಡಾ ಅಧಿಕಾರಿಗಳು ಇನ್ಮೇಲಾದ್ರೂ ನಿದ್ದೆಯಿಂದ ಎದ್ದು 14 ವರ್ಷಗಳಿಂದ ತಮ್ಮದೇ ಜಮೀನಿನಲ್ಲಿ ಪ್ಲಾಟ್‍ಗಳಿಗಾಗಿ ಕಾಯುತ್ತಿರುವ ರೈತರಿಗೆ ಪ್ಲಾಟ್‍ಗಳನ್ನು ಹಂಚಿಕೆ ಮಾಡುವ ಕೆಲಸ ಮಾಡಬೇಕಿದೆ.

Tags:

error: Content is protected !!