Belagavi

ಎನ್‍ಸಿಪಿಯಿಂದ ಮ್ಯಾರಾಥಾನ್ ಸ್ಪರ್ಧೆ..ಎಲ್ಲರ ಗಮನ ಸೆಳೆದ 70ರ ಹರೆಯದ ಸುರೇಶ ದೇವರಮನಿ, ಧೋಂಡಿಬಾ ಶಿಂಧೆ

Share

ಬೆಳಗಾವಿಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಮ್ಯಾರಾಥಾನ್ ಸ್ಪರ್ಧೆಯಲ್ಲಿ 70ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಾಷ್ಟ್ರಮಟ್ಟದ ಕ್ರೀಡಾಪಟು ಸುರೇಶ ದೇವರಮನಿ ಪಾಲ್ಗೊಂಡಿದ್ದರು. ಇನ್ನೊಬ್ಬ ಕ್ರೀಡಾಪಟು ಧೋಂಡಿಬಾ ಶಿಂಧೆ ಅವರಿಗೆ ಸಾಥ್ ನೀಡಿದರು.
ತಮ್ಮದೇ 70ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಾಷ್ಟ್ರಮಟ್ಟದ ಕ್ರೀಡಾಪಟು ಸುರೇಶ ದೇವರಮನಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಮ್ಯಾರಾಥಾನ್ ಸ್ಪರ್ಧೆಯಲ್ಲಿ

ಶುಕ್ರವಾರ ಪಾಲ್ಗೊಂಡು ಕ್ರೀಡಾಪ್ರೇಮ ಮೆರೆದರು. ಉಚಗಾಂವ್ ಗ್ರಾಮ ದೇವತೆ ಮಲೆಕಮ್ಮಾ ದೇವಿಗೆ ಪೂಜೆ ಸಲ್ಲಿಸಿ ಕ್ರೀಡಾಪಟುಗಳು ಓಟ ಆರಂಭಿಸಿದರು. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ರಾಜು ಪಾಟೀಲ ಹಸಿರು ನಿಶಾನೆ ತೋರಿಸಿ ಮ್ಯಾರಾಥಾನ್‍ಗೆ ಚಾಲನೆ ನೀಡಿದರು.ಎನ್‍ಸಿಪಿ ಪದಾಧಿಕಾರಿಗಳಾದ ದುರ್ಗೇಶ ಮೇತ್ರಿ, ಕೆ.ಜಿ.ಪಾಟೀಲ, ಜ್ಯೋತಿಬಾ ಪಾಟೀಲ, ಅಮೋಲ್ ದೇಸಾಯಿ, ರಾಮಕೃಷ್ಣ ಸಾಂಬ್ರೇಕರ, ನಾರಾಯಣ ಮೇತ್ರಿ, ಕೃಷ್ಣಾ ಕಾಂಬಳೆ, ವಿನಾಯಕ ಪಾಟೀಲ, ಮತ್ತಿತರರು ಈ ವೇಳೆ ಇದ್ದರು.
ಕ್ರೀಡಾಪಟುಗಳು ಓಡುತ್ತ 18 ಕಿ.ಮೀ. ಕ್ರಮಿಸಿ ಒಂದು ಗಂಟೆಯಲ್ಲಿ ಬೆಳಗಾವಿ ಅಂಬೇಡ್ಕರ್ ಗಾರ್ಡನ್ ತಲುಪಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿವಿಧ ದಲಿತ ಸಂಘಟನೆಗಳಿಂದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

Tags:

error: Content is protected !!