Education

ಇವು ಶಾಲೆಗಳಲ್ಲ, ಸುರಕ್ಷತಾ ಕೇಂದ್ರಗಳು..ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ..ಪಾಲಕರಿಗೆ ಸುರೇಶ್‍ಕುಮಾರ್ ಮನವಿ

Share

ಎಲ್ಲಾ ಶಾಲೆಗಳೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ. ಇವು ಶಾಲೆಗಳಲ್ಲ, ಸುರಕ್ಷತಾ ಕೇಂದ್ರಗಳು. ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗಳಿಗೆ ಕಳಿಸಬಹುದು ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಮಹಾಮಾರಿ ಕೊರೊನಾ ಆತಂಕದ ನಡುವೆಯೇ ರಾಜ್ಯಾದ್ಯಂತ ಇಂದಿನಿಂದ ಶಾಲಾ-ಕಾಲೇಜು, ವಿದ್ಯಾಗಮ ಆರಂಭಗೊಂಡಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್, ಆನ್ ಲೈನ್ ಕ್ಲಾಸ್‍ಗಳಿಗಿಂತ ಮಕ್ಕಳು ಶಾಲೆಗೆ ಬಂದು ಕಲಿತರೆ ಪರಿಪೂರ್ಣರಾಗುತ್ತಾರೆ.

ಹಾಗಂತ ಶಾಲೆಗೆ ಬರುವಂತೆ ಒತ್ತಾಯ ಮಾಡಲ್ಲ. ಒಟ್ಟಾರೆ ಶಾಲೆಗಳು ಪುನರಾರಂಭವಾಗಿವೆ ಎಂದರು. ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿಲ್ಲ. ಸೋಮವಾರದಿಂದ ಬರಬಹುದು ಎಂದು ಹೇಳಿದರು. ಇನ್ನು ಪೋಷಕರಲ್ಲಿ ಆತಂಕವಿದೆ.

ಆದರೆ ಆತಂಕಪಡುವ ಅಗತ್ಯವಿಲ್ಲ. ಹೊಸ ಪ್ರಭೇದದ ಕೊರೊನಾ ಕೂಡ ಹಳೆ ಕೊರೊನಾದಂತೆಯೇ ಇದೆ. ಆದರೆ ವೇಗವಾಗಿ ಹರಡುತ್ತೆ ಅμÉ್ಟೀ. ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

 

Tags:

error: Content is protected !!