Belagavi

ಅಮಿತ್ ಷಾ ಕಾರ್ಯಕ್ರಮಕ್ಕೆ ಬೆಳಗಾವಿ ಮದುಮಗಳಂತೆ ಸಜ್ಜಾಗಿದೆ..1 ಲಕ್ಷ ಜನ ಸೇರುವ ನಿರೀಕ್ಷೆ..ಗಣೇಶ ಕಾರ್ಣಿಕ

Share

ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗಿಯಾಗಲಿರುವ ಜನಸೇವಕ ಸಮಾವೇಶ ಅದ್ಭುತ ಸಮಾವೇಶ ಆಗಲಿದೆ. ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಲಿದ್ದು. ಐದು ಸಾವಿರ ನೂತನ ಗ್ರಾಮ ಪಂಚಾಯತಿ ಸದಸ್ಯರು ಕೂಡ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ಗಣೇಶ ಕಾರ್ಣಿಕ ಮಾಹಿತಿ ನೀಡಿದ್ದಾರೆ.

ರವಿವಾರ ರಾಜ್ಯ ಬಿಜೆಪಿಯಿಂದ ಆಯೋಜಿಸಿರುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣ ಸಜ್ಜಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮಾವೇಶದಲ್ಲಿ ಭಾಗಿಯಾಗುತ್ತಿರುವುದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇನ್ನು ಈ ಸಮಾವೇಶ ಸಂಬಂಧ ಶನಿವಾರ ಖಾಸಗಿ ಹೋಟೆಲ್‍ನಲ್ಲಿ ಸಚಿವ ಉಮೇಶ ಕತ್ತಿ, ಬಿಜೆಪಿ ವಕ್ತಾರ ಗಣೇಶ ಕಾರ್ಣಿಕ ಮಹೇಶ ಟೆಂಗಿನಕಾಯಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆರಂಭದಲ್ಲಿ ಮಾತನಾಡಿದ ಗಣೇಶ ಕಾರ್ಣಿಕ ಮೊದಲ ಬಾರಿ ಪ್ರಧಾನಿ ಆದಾಗ ಮೋದಿ ಪ್ರಧಾನ ಸೇವಕ ಎಂದು ಕರೆದುಕೊಂಡಿದ್ದರು. ಕರ್ನಾಟಕದಲ್ಲಿ 6 ತಂಡಗಳಾಗಿ ಈ ಬಾರಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ಪ್ರಥಮ ಬಾರಿ ಶೇ.58ರಷ್ಟು ಗ್ರಾಮ ಪಂಚಾಯತಿಯಲ್ಲಿ ಸೀಟ್ ಗೆದ್ದಿದ್ದೇವೆ. ಗೆದ್ದ ಅಭ್ಯರ್ಥಿಗಳಿಗೆ ಸೇವಕನ ಭಾವನೆ ಮೂಡಿಸಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. 5 ತಂಡಗಳು ರಾಜ್ಯದ 26 ಕೇಂದ್ರಗಳಲ್ಲಿ ಜನಸೇವಕ ಸಮಾವೇಶ ಮಾಡಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಸೇವಕ ಸಭೆ ಯಶಸ್ವಿಯಾಗಿದೆ. ಮೈಸೂರಿನನಲ್ಲಿ ಆರಂಭವಾದ ಈ ಸಭೆ ನಾಳೆ ಬೆಳಗಾವಿಯಲ್ಲಿ ಅಂತ್ಯವಾಗಲಿದೆ ಎಂದು ತಿಳಿಸಿದರು. ಇನ್ನು ಬೆಳಗಾವಿ ಬಿಜೆಪಿ ಜನಸೇವಕ ಸಮಾವೇಶಕ್ಕೆ ಮದುಮಗಳಂತೆ ಅಲಂಕಾರಗೊಂಡಿದೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಮಾಧ್ಯಮಗಳು ಕೋವಿಡ್ ನಿಯಮಗಳ ಉಲ್ಲಂಘನೆ, ಸಮಾವೇಶಕ್ಕೆ ಅನುಮತಿ ತೆಗೆದುಕೊಂಡಿದ್ದಿರಾ ಎಂದು ಕೇಳಿದ ಪ್ರಶ್ನೆಗೆ ಬಿಜೆಪಿ ನಾಯಕರು ಸ್ಪಷ್ಟವಾದ ಉತ್ತರ ನೀಡದೇ ಹಾರಿಕೆ ಉತ್ತರ ನೀಡಿದ್ದು ಇದೇ ಕಂಡು ಬಂತು.

ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಸೇರಿದಂತೆ ರಾಜ್ಯದ ಹಲವು ನಾಯಕರು ಭಾಗಿಯಾಗಲಿದ್ದಾರೆ. ರವಿವಾರ ಬೆಳಿಗ್ಗೆ 10.25ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಬೆಳಗಾವಿಯಿಂದ ನಿರಾಣಿ ಶುಗರ್ಸ್‍ಗೆ ತೆರಳಿ ನಂತರ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ್ ಪಾಟೀಲ್, ನಗರ ಜಿಲ್ಲಾಧ್ಯಕ್ಷ ಶಶಿಕಾಂತ ಪಾಟೀಲ್, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ್ ನೇರ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!