Belagavi

ಅನಗೋಳ ಕೊತ್ವಾಲ್ ಸ್ಮಶಾನ ಭೂಮಿ ಆಸ್ತಿ ವಿವಾದ: ಕೊತ್ವಾಲ ಕುಟುಂಬದಿಂದ ಜಿಲ್ಲಾಧಿಕಾರಿಗೆ ಮನವಿ

Share

ಬೆಳಗಾವಿ ಅನಗೋಳ ಭಾಗ್ಯ ನಗರದ 7ನೇ ಕ್ರಾಸ್‍ನಲ್ಲಿರುವ ತಳವಾರ ಕೊತ್ವಾಲ್ ಸ್ಮಶಾನ ಭೂಮಿ ಆಸ್ತಿಯಲ್ಲಿ ತಮ್ಮ ಹೆಸರು ಸೇರಿಸಲು ಕೆಲವರು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಅಂತವರಿಗೆ ಮಾನ್ಯತೆ ನೀಡಬಾರದು. ಕೊತ್ವಾಲ್ ಕುಟುಂಬಕ್ಕೆ ಕಾನೂನು ಪ್ರಕಾರ ಸೇರಿದ ಆಸ್ತಿಯಲ್ಲಿ ಯಾರದೇ ಹೆಸರು ಸೇರಿಸಲು ಆಕ್ಷೇಪ ಇದೆ ಎಂದು ಬೆಳಗಾವಿ ಭಾಗ್ಯನಗರದ ಕೊತ್ವಾಲ ಕುಟುಂಬದ ಸದಸ್ಯರು ಜಿಲ್ಲಾಡಳತಕ್ಕೆ ಮನವಿ ಸಲ್ಲಿಸಿದರು.

: ಬೆಳಗಾವಿ ಅನಗೋಳ ಭಾಗ್ಯ ನಗರದ 7ನೇ ಕ್ರಾಸ್‍ನಲ್ಲಿರುವ ಸರ್ವೇ ನಂ 47/4ರ ತಳವಾರ ಕೊತ್ವಾಲ್ ಸ್ಮಶಾನ ಭೂಮಿಯ ಆಸ್ತಿಯಲ್ಲಿ ಬೇರೆಯವರ ಹೆಸರು ಸೇರಿಸಲು ನಡೆದಿರುವ ಪ್ರಯತ್ನಗಳ ಬಗ್ಗೆ ವಿವರವಾದ ಮಾ

ಹಿತಿ ನೀಡಿ ಜಿಲ್ಲಾಧಿಕಾರಿಗಳಿಗೆ ಕೊತ್ವಾಲ್ ಕುಟುಂಬದವರು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮನವಿ ಸಲ್ಲಿಸಿದ ವಕೀಲ ಆಯ್.ಎಂ. ಕೊತ್ವಾಲ್ ಮಾತನಾಡಿ, ವಸಿಂ ನಿಸಾರ್‍ಅಹ್ಮದ್ ಕೊತ್ವಾಲ್ ತಪ್ಪು ಮಾಹಿತಿ ನೀಡಿ ಆಸ್ತಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ಕುರಂದವಾಡ ಸರ್ಕಾರದಿಂದ ಅನಗೋಳ ಕೊತ್ವಾಲ್ ಕುಟುಂಬದವರಿಗೆ ಮಂಜೂರಾದ ಸ್ಮಶಾನ ಭೂಮಿಯಲ್ಲಿ ಬೇರೆಯವರ ಹೆಸರು ಸೇರಿಸಲು ಅವಕಾಶ ಇಲ್ಲ. ತಪ್ಪು ಮಾಹಿತಿ ನೀಡಿ ಆಟೋ ಡ್ರೈವರ್‍ಗಳನ್ನು ಕರೆದುಕೊಂಡು ಬಂದು ನೀಡಿದ ಅರ್ಜಿಯನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಬೆಳಗಾವಿ ಅನಗೋಳ ಭಾಗ್ಯ ನಗರದ 7ನೇ ಕ್ರಾಸ್‍ನಲ್ಲಿರುವ ಸರ್ವೇ ನಂ 47/4ರ ತಳವಾರ ಕೊತ್ವಾಲ್ ಸ್ಮಶಾನ ಭೂಮಿಯ ಆಸ್ತಿಯಲ್ಲಿ ಬೇರೆಯವರ ಹೆಸರು ಸೇರಿಸಲು ನಡೆದಿರುವ ಪ್ರಯತ್ನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೊತ್ವಾಲ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Tags:

error: Content is protected !!