Belagavi

ಬಿಜಗರಣಿ ಮಹಾಲಕ್ಷ್ಮಿ ದೇವಸ್ಥಾನ ಸ್ಲ್ಯಾಬ್ ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Share

ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಜಗರಣಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ (ಸ್ಲ್ಯಾಬ್) ಪೂಜಾ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಲ್ಯಾಬ್ ಪೂಜೆ ನೆರವೇರಿಸಿದರು.

ಬಿಜಗರಣಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ (ಸ್ಲ್ಯಾಬ್) ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ದೇವಸ್ಥಾನಗಳು ಊರಿನ ಪ್ರಮುಖ ಕೇಂದ್ರಬಿಂದುಗಳಾಗಿದ್ದು, ಎಲ್ಲರಿಗೂ ಸನ್ಮಾರ್ಗ ಕರುಣಿಸುವ ಹಾಗೂ ಸಾತ್ವಿಕ ಸಮಾಜ ನಿರ್ಮಾಣದ ಶಕ್ತಿ ಕೇಂದ್ರಗಳಾಗಿವೆ. ನಮಗೆ ಒಳ್ಳೆಯ ಸಂಸ್ಕಾರ ಕಲಿಸುವುದರೊಂದಿಗೆ ಆಧ್ಯಾತ್ಮಿಕ ಬದುಕನ್ನು ತೋರಿಸುತ್ತವೆ ಎಂದು ಹೇಳಿದರು.

ಸ್ಲ್ಯಾಬ್ ಪೂಜೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸುಧೀರ್ ಗಡ್ಡೆ, ಅರುಣ ಕಟಾಂಬಳೆ, ಬೆಳವತ್ಕರ್, ಮನು, ಬೆಳವತ್ಕರ್, ರಾಜು ಚೌಗುಲೆ, ಪುಂಡಲೀಕ್ ತಾರಿಹಾಳಕರ್, ಶಿವಾಜಿ ಬೆಟಗೇರಕರ್, ದಶರಥ ಸೂರ್ಯವಂಶಿ, ಅಪ್ಪಾ ಜಾಧವ್, ಎಸ್ ಆರ್ ಮೋರೆ, ಶಾಂತಿನಾಥ ಬೋಗಾರ್, ಅಶೋಕ ಶಿರೋಳೆ, ವಿಠ್ಠಲ ಮೋರೆ, ಪುಂಡಲಿಕ್ ಜಾಧವ್, ಆನಂದ ಜಾಧವ್, ರಾಜು ಮುಂಚಡ್ಡಿಕರ್, ಬಾಹು ದೇಸುರಕರ್, ಭಜರಂಗ ಪಾಟೀಲ, ಸಂದೀಪ ಅಸ್ಟೇಕರ್, ಗ್ರಾಮದ ಮಹಿಳೆಯರು, ದೇವಸ್ಥಾನದ ಕಮೀಟಿಯವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!