ಹುಕ್ಕೇರಿ ತಾಲೂಕಾ ಪಂಚಾಯತಿಯ 2019-20ನೇ ಸಾಲಿನ ವಾರ್ಷಿಕ ಜಮಾಬಂದಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹುಕ್ಕೇರಿ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ಜಮಾಬಂದಿ ಕಾರ್ಯಕ್ರಮವು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಶ್ರೀಮತಿ ಗೌರಮ್ಮಾ ಸುಂಕದ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳಿಗೆ ನೀಡಿದ ಅನುದಾನ ಮತ್ತು ಅವುಗಳ ಅನುಷ್ಟಾನಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.
ತಾಲೂಕಾ ಪಂಚಾಯತ ವ್ಯವಸ್ಥಾಪಕ ಆರ್ ಎ ಚಟ್ನಿ ಸಭೆಗೆ ಅನುದಾನ ಮತ್ತು ಖರ್ಚುಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ತಾಲೂಕಾ ಪಂಚಾಯತ ಅದ್ಯಕ್ಷ ದಸ್ತಗೀರ ಬಸ್ಸಾಪೂರೆ, ಉಪಾದ್ಯಕ್ಷೆ ಲಕ್ಷ್ಮಿಬಾಯಿ ಪಾಟೀಲ, ಸ್ಥಾಯಿ ಸಮಿತಿ ಅದ್ಯಕ್ಷೆ ಸುನಿತಾ ಬಿಸಿರೋಟ್ಟಿ, ಇಓ ಬೀಮಪ್ಪಾ ಲಾಳೆ, ವ್ಯವಸ್ಥಾಪಕ ಆರ್ ಎ ಚಟ್ನಿ ಉಪಸ್ಥಿತರಿದ್ದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ನೋಡಲ್ ಅಧಿಕಾರಿ ಗೌರಮ್ಮಾ ಸುಂಕದ ಹುಕ್ಕೇರಿ ತಾಲೂಕಾ ಪಂಚಾಯತ ಜಮಾಬಂದಿ ಸಭೆಯಲ್ಲಿ ಸರ್ಕಾರದ ಅನುದಾನ ಹಾಗೂ ಖರ್ಚುಗಳ ಬಗ್ಗೆ ವಿವರ ಪಡೆಯಲಾಗಿದೆ ಹಾಗೂ ಇನ್ನೂಳಿದ ಕಾಮಗಾರಿಗಳನ್ನು ಶೀಘ್ರವಾಗಿ ಅಂತಿಮಗೋಳಿಸಲು ಸೂಚಿಸಲಾಗಿದೆ ಯಾವದೆ ಕಾರಣಕ್ಕೂ ಅನುದಾನ ಮರಳಿ ಹೋಗದಂತೆ ಅಧಿಕಾರವನ್ನು ಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧಿಕ್ಷಕರಾದ ಸುಶೀಲಾ ವನ್ನೂರ, ಲೆಕ್ಕಾಧಿಕಾರಿ ಲಕ್ಷ್ಮೀ ಭಂಡಾರೆ, ಪಿ.ಪಿ.ದೇಶಪಾಂಡೆ, ರಾಜು ವಂಜೇರಿ ಹಾಗೂ ತಾಲೂಕಾ ಪಂಚಾಯತ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.