ದೇಶದಲ್ಲಿ ರಾಷ್ಟ್ರೀಯ ವಿಪತ್ತು ಎದುರಾದಾಗಲೆಲ್ಲ ಜಾಯಂಟ್ಸ್ ಗ್ರುಪ್ ಸಹಾಯಕ್ಕೆ ಧಾವಿಸಿ ಬಂದಿದೆ. ಜಾಯಂಟ್ಸ್ ಇದೊಂದು ಸ್ವದೇಶಿ ಸಂಸ್ಥೆಯಾಗಿದೆ ಎಂದು ಜಾಯಂಟ್ಸ್ ಇಂಟರನ್ಯಾಷಲ್ ಡೆಪ್ಯೂಟಿ ವಲ್ಡ್ ಚೇರಮನ್ ಎಂ. ಲಕ್ಷ್ಮಣನ್ ಅವರು ಪ್ರತಿಪಾದಿಸಿದರು.

ಭಾನುವಾರದಂದು ಬ್ರಹ್ಮಾವರದಲ್ಲಿ ನಡೆದ ಜಾಯಂಟ್ಸ್ ಗ್ರುಪ್ ಆಫ್ ಬ್ರಹ್ಮಾವರನ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಘಟಕದ ಪರಿಷತನ ವೇಲೆ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ದ್ವಾರಕಾಯಿಮಠದ ಸಾಯಿ ಈಶ್ವರ ಗುರುಜೀಗಳ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದಿಂದ 28 ಗ್ರುಪನ ವಿವಿಧ ಸದಸ್ಯರು ಇದರಲ್ಲಿ ಭಾಗಿಯಾಗಿದ್ಧರು. ಫೆಡರೇಶನ 6 ರ ಅಧ್ಯಕ್ಷ ಲಗಮಣ್ಣಾ ದೊಡ್ಡಮನಿ ಉಪಸ್ಥಿತರಿದ್ಧರು.
ವೇದಿಕೆಯ ಮೇಲೆ ಜಾಯಂಟ್ಸ್ ಸೇಂಟ್ರಲ್ ಕಮೀಟಿ ಸದಸ್ಯರಾದ ದಿನಕರ ಅಮೀನ್, ಮೋಹನ್ ಕಾರೇಕರ, ಗಜಾನನ ನಿಲಕೇರಿ, ಬ್ರಹ್ಮಾವರ ಗ್ರುಪನ ಅಧ್ಯಕ್ಷ ಸುಂದರ ಪುಜಾರಿ ಉಪಸ್ಥಿತರಿದ್ಧರು.
ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಸಂಚಾಲಕರಾದ ಅನಂತ ಲಾಡ್, ಅವಿನಾಶ ಪಾಟೀಲ, ಯಲ್ಲಪ್ಪ ಪಾಟೀಲ, ಜಯವಂತ ಪಾಟೀಲ, ಶಿವಕುಮರ ಹಿರೇಮಠ, ಮಧು ಬೆಳಗಾಂವಕರ, ಭಾಸ್ಕರ್ ಕದಮ್, ಅನಂತ ಕುಚೇಕರ ಇನ್ನುಳಿದವರು ಭಾಗಿಯಾಗಿದ್ದರು.