ನಾನು ಮುಂಬೈ ಟೀಮ್ನವನಲ್ಲ. ಕೆಲವರಿಗೆ ಸಚಿವ ಸ್ಥಾನ ತಪ್ಪಲು ಕಾನೂನು ಸಮಸ್ಯೆ ಕಾರಣವಾಗಿರಬಹುದು. ಕರೆದು ಸಚಿವ ಸ್ಥಾನ ಕೊಟ್ಟು ಕೆಲಸ ಮಾಡಲು ಹಚ್ಚಿದ ಮುಖ್ಯಮಂತ್ರಿಗಳು ಮಾತಿಗೆ ತಪ್ಪುವವರಲ್ಲ ಎಂದು ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ನನ್ನನ್ನು ಸಂಪುಟದಿಂದ ಕೈಬಿಡುತ್ತಾರೆ, ನಾನು ಆ್ಯಕ್ಟಿವ್ ಸಚಿವ ಅಲ್ಲ ಎನ್ನುವುದು ಸುಳ್ಳು ಸುದ್ದಿಯಾಗಿದೆ. ಮೈನಾರಿಟಿ ಸಮುದಾಯದ ಯಾರನ್ನೇ ಕೇಳಿದರೂ ನಾನು ಆ್ಯಕ್ಟಿವ್ ಸಚಿವ ಎನ್ನುವುದನ್ನು ಹೇಳುತ್ತಾರೆ. ನಾನು ಕೆಲಸ ಮಾಡುತ್ತೇನೆ, ಪ್ರಚಾರದ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನನ್ನ ಆಕ್ಟಿವಿಟಿ, ನನ್ನ ಖಾತೆಯ ಆಕ್ಟಿವಿಟಿ ಬಹಿರಂಗವಾಗುವುದಿಲ್ಲ. ಇನ್ನು ಮೇಲೆ ಪ್ರಚಾರಕ್ಕೂ ನಾನು ಪ್ರಯತ್ನಿಸುತ್ತೇನೆ ಎಂದರು.
ಕೆಲವರಿಗೆ ಸಚಿವ ಸ್ಥಾನ ತಪ್ಪಲು ಕಾನೂನು ಸಮಸ್ಯೆ ಕಾರಣವಾಗಿರಬಹುದು. ಕರೆದು ಸಚಿವ ಸ್ಥಾನ ಕೊಟ್ಟು ಕೆಲಸ ಮಾಡಲು ಹಚ್ಚಿದ ಮುಖ್ಯಮಂತ್ರಿಗಳು ಮಾತಿಗೆ ತಪ್ಪುವವರಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ. ಇನ್ನು ನಾನು ಮುಂಬೈ ಟೀಮ್ನವನಲ್ಲ ಎಂದು ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ಒಟ್ಟಿನಲ್ಲಿ ಸಚಿವ ಶ್ರೀಮಂತ ಪಾಟೀಲ, ತಾನು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಮುಖ್ಯಮಂತ್ರಿ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ, ವಹಿಸಿದ ಜವಾಬ್ದಾರಿಯನ್ನು ಸಮರ್ಥನಾಗಿ ನಿರ್ವಹಿಸುತ್ತೇನೆ ಎಂದು ಬಹಿರಂಗವಾಗಿ ತಿಳಿಸಿದರು.