ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಬೆಳಗಾವಿಯ ಹೆಸರಾಂತ ರಂಗೋಲಿ ಕಲಾವಿದ ಅಜಿತ್ ಔರವಾಡಕರ 2 ಮತ್ತು 3 ಅಡಿ ಅಳತೆಯಲ್ಲಿ ಸ್ವಾಮಿ ವಿವೇಕಾನಂದರ ಹಸನ್ಮುಖದ ರಂಗೋಲಿ ಚಿತ್ರ ಬಿಡಿಸಿದ್ದಾರೆ. ವಡಗಾಂವಿಯ ನಾಜರ್ ಕ್ಯಾಂಪ್ನ ಜ್ಯೋತಿ ಫೋಟೋ ಸ್ಟುಡಿಯೋದಲ್ಲಿ ಜನವರಿ 15ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಈ ರಂಗೋಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
ಬೆಳಗಾವಿ ರಂಗೋಲಿ ಕಲಾವಿದ ಅಜಿತ್ ಔರವಾಡಕರ ಅವರ ಕೈ ಚಳಕದಲ್ಲಿ ಈ ಬಾರಿ ಸ್ವಾಮಿ ವಿವೇಕಾನಂದರ ಹಸನ್ಮುಖದ ರಂಗೋಲಿ ಚಿತ್ರ ಮೂಡಿ ಬಂದಿದೆ. 2 ಅಡಿ ಉದ್ದ ಮತ್ತು 3 ಅಡಿ ಅಗಲ ಅಳತೆಯಲ್ಲಿ ಸ್ವಾಮಿ ವಿವೇ
ಕಾನಂದರ ವಿಶೇಶ ಭಂಗಿಯ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ. ವಡಗಾಂವಿಯ ನಾಜರ್ ಕ್ಯಾಂಪ್ನ ಜ್ಯೋತಿ ಫೋಟೋ ಸ್ಟುಡಿಯೋದಲ್ಲಿ ಜನವರಿ 15ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಈ ರಂಗೋಲಿ ಪ್ರದರ್ಶನಕ್ಕೆ ಇರಿಸಲಾಗಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.
ಕಳೆದ ಬಾರಿ ಕಲಾವಿದ ಅಜಿತ್ ಔರವಾಡಕರ್ ಬಿಡಿಸಿದ ರಂಗೋಲಿ ಚಿತ್ರಗಳಿಗೆ ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು ಎಂಬುದು ಗಮನಾರ್ಹವಾಗಿದೆ.