COVID-19

ಜ.16ರಿಂದ ಕೊರೊನಾ ಲಸಿಕೆ ಅಭಿಯಾನ ಶುರು..ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ..ಪ್ರಧಾನಿ ಮೋದಿ

Share

ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಇದು ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನವಾಗಿದ್ದು. ಮೊದಲಿಗೆ ಅರೋಗ್ಯ ಕಾರ್ಯಕರ್ತರಿಗೆ ನಂತ್ರ ಫ್ರಂಟ್ ಲೈನ್ ವಾರಿಯರ್ಸ್‍ಗೆ ಲಸಿಕೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವಾ.ಓ: ಹೌದು ದೇಶದ ಹಲವು ರಾಜ್ಯಗಳ ಜೊತೆಗೆ ಸೋಮವಾರ ಕೊರೊನಾ ಲಸಿಕೆ ವಿತರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಲಸಿಕೆ ಹಂಚಿಕೆ ಬಗ್ಗೆ ಸಿಎಂಗಳ ಅಭಿಪ್ರಾಯ ಪಡೆದುಕೊಂಡರು.

ಸಿಎಂಗಳ ಜೊತೆಗಿನ ಸಭೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾ ಮಟ್ಟದ ಅಧಿಕಾರಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇಡೀ ಸಮಾಜ ಒಗ್ಗಟ್ಟಾಗಿರಬೇಕು. ಆರೋಗ್ಯ ಸ್ಥಿತಿ ಸುಧಾರಣೆಗಾಗಿ ಹಲವು ಸಲಹೆಗಳನ್ನ ನೀಡಲಾಗ್ತಿದೆ. ಕೇಂದ್ರ, ರಾಜ್ಯ ಒಟ್ಟಾಗಿ ಹೋರಾಟ ನಡೆಸುತ್ತಿವೆ. ವಿಶ್ವದ ಅತೀದೊಡ್ಡ ಅಭಿಯಾನ ನಡೆಯಲಿದೆ. 8-9 ತಿಂಗಳು ಹಿಂದೆ ಇದ್ದ ಭಯದಿಂದ ಜನ ಹೊರ ಬಂದಿದ್ದಾರೆ. ಎರಡು ಲಸಿಕೆಗಳನ್ನ ಭಾರತದಲ್ಲಿ ತಯಾರಿಸಲಾಗಿದೆ. ಎರಡೂ ಕೂಡ ಮೇಡ್ ಇನ್ ಇಂಡಿಯಾ ಲಸಿಕೆಗಳು. ಮುಂದಿನ ದಿನಗಳಲ್ಲಿ ಬೇರೆ ಲಸಿಕೆಗಳು ಬರಲಿವೆ. 40 ರಿಂದ 50 ವರ್ಷದವರಿಗೆ ಬೇರೆ ಲಸಿಕೆಗಳು ಬರಲಿವೆ. ಲಸಿಕೆ ವಿಷಯದಲ್ಲಿ ವಿಜ್ಞಾನಿಗಳ ಮಾತು ಕೇಳೋಣ. ಈ ಮಾತನ್ನ ನಾನು ಮುಂಚೆಯೇ ಹೇಳಿದ್ದೆ ಎಂದು ಮೋದಿ ಹೇಳಿದರು.

ಮೊದಲಿಗೆ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತೆ. 50 ವರ್ಷದವರು ರೋಗದಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಹೆಚ್ಚಿನ ಅಪಾಯವಿದೆ. ದೇಶದ ಎಲ್ಲ ಜಿಲ್ಲೆಗಳಲ್ಲಿಯೂ ಡ್ರೈರನ್ ನಡೆಸಲಾಗಿದೆ. ವಿದೇಶಿ ಲಸಿಕೆ ಅವಲಂಬಿಸಿದ್ದಾರೆ ತುಂಬಾ ಕಷ್ಟವಾಗ್ತಿತ್ತು. ಚುನಾವಣೆ ಮಾದರಿಯಲ್ಲಿ ಲಸಿಕೆ ಆಭಿಯಾನ ನಡೆಸಲಾಗುತ್ತೆ ಲಸಿಕೆ ಹಂಚಿಕೆಗೆ ಬೂತ್ ಮಟ್ಟದ ಕಾರ್ಯತಂತ್ರವನ್ನ ಅನುಸರಿಸುತ್ತೇವೆ. ವಿಶ್ವದ ಯಾವುದೇ ಲಸಿಕೆಗಳಿಂದ ನಮ್ಮ ಲಸಿಕೆ ಪರಿಣಾಮಕಾರಿಯಾಗಿದೆ. ಲಸಿಕೆ ಕುರಿತ ಎಲ್ಲ ಮಾಹಿತಿ ಕೋವಿನ್ ಆಪ್ʼನಲ್ಲಿ ಅಳವಡಿಸಲಾಗುತ್ತೆ ಲಸಿಕೆ ಪಡೆದವರಿಗೆ ಇ ಸರ್ಟಿಫಿಕೇಟ್ ಕೊಡಲಾಗುತ್ತೆ. ನಮ್ಮ ಲಸಿಕೆ ಅಭಿಯಾನ ಬೇರೆ ದೇಶಗಳಿಗೆ ಮಾದರಿಯಾಗಬೇಕು. ಲಸಿಕೆಗೆ ಲಸಿಕೆಗೆ ಕಾರ್ಪೋರೇಟ್‌ ಕಂಪನಿಗಳಲ್ಲಿ ಪೈಪೋಟಿ  ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

ಒಟ್ಟಾರೆ ಜ.16ರಿಂದ ದೇಶಾಧ್ಯಂತ ಕೊರೊನಾ ಲಸಿಕೆ ಅಭಿಯಾನ ಯುದ್ಧೋಪಾದಿಯಲ್ಲಿ ಶುರುವಾಗಲಿದ್ದು. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಭಾಗ್ಯ ಸಿಗಲಿದೆ.

 

Tags:

error: Content is protected !!