Belagavi

ಬೆಳಗಾವಿ ನಗರ ಅಭಿವೃದ್ಧಿಗೆ ಪಣ ತೊಟ್ಟ ಘೂಳಪ್ಪ ಹೊಸಮನಿ..ಬುಡಾ ಅಧ್ಯಕ್ಷರಾಗಿ ನಾಳೆಗೆ ಒಂದು ವರ್ಷ

Share

ಘೂಳಪ್ಪ ಹೊಸಮನಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಜ.10ಕ್ಕೆ ಭರ್ತಿ ಒಂದು ವರ್ಷ. ಈ ಅಲ್ಪಾವಧಿಯಲ್ಲಿ ಅವರು ಬುಡಾ ಮೂಲಕ ಬೆಳಗಾವಿಯ ಚಿತ್ರಣವನ್ನೆ ಬದಲು ಮಾಡುವ ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ.

ಹೌದು ಬೆಳಗಾವಿ ರಾಜ್ಯದ ಎರಡನೇ ಅತೀ ದೊಡ್ಡ ನಗರ, ಎರಡನೇ ರಾಜಧಾನಿಯೂ ಹೌದು. ವಿಪುಲ ಸಂಪನ್ಮೂಲಗಳನ್ನು ಈ ನಗರ ಹೊಂದಿದ್ದರೂ ಸದ್ಭಳಕೆ ಮಾತ್ರ ಆಗಿರಲಿಲ್ಲ. ಇನ್ನು ಬುಡಾ ಅಭಿವೃದ್ಧಿ ನಿಂತ ನೀರಾಗಿತ್ತು. ಅಭಿವೃದ್ಧಿ ಎನ್ನುವುದು ಕುಂಠಿತವಾಗಿತ್ತು. ಇದನ್ನು ಮನಗಂಡ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅಭಿವೃದ್ಧಿ ಚಿತ್ರಣಕ್ಕೆ ಹೊಸಸ್ಪರ್ಶ ನೀಡಲು ಮುಂದಾದರು. ಇದರಿಂದಾಗಿ ಇಂದು ಬೆಳಗಾವಿ ಬುಡಾದಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗೋತ್ಕರ್ಷ ಸಿಕ್ಕಿದೆ. ಮನೆ, ರಸ್ತೆ, ಉದ್ಯಾನ, ಚರಂಡಿ ಸೇರಿದಂತೆ ಸಮಗ್ರ ಮೂಲಭೂತ ಅವಶ್ಯಕತೆಗಳಿಗಿಂದು ಬುಡಾ ತಕ್ಷಣ ಸ್ಪಂದಿಸುತ್ತಿದೆ. ಇದಕ್ಕೆ ಕಾರಣ ಘೂಳಪ್ಪ ಹೊಸಮನಿಯವರ ಸಮರ್ಥ ನಾಯಕತ್ವ. ಒಟ್ಟಾರೆ, ಇಡೀ ಬುಡಾ ಇಂದು ಮೈ ಕೊಡವಿಕೊಂಡು ಮೇಲೇಳಲು ಘೂಳಪ್ಪ ಹೊಸಮನಿಯವರ ಚಲನಶೀಲ ಹಾಗೂ ಉತ್ಸಾಹಿ ನಾಯಕತ್ವ ಕಾರಣವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಅಂದಾಜು 1234 ಎಕರೆ ಜಮೀನಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಘೂಳಪ್ಪ ಹೊಸಮನಿ ಅಧ್ಯಕ್ಷರಾದ ನಂತರ ಹತ್ತು ಹಲವು ಅಭಿವೃದ್ಧಿ ಕೈಗೊಂಡಿದ್ದಾರೆ. 165 ಕೋಟಿ ವೆಚ್ಚದಲ್ಲಿ ಕಣಬರ್ಗಿ ಗ್ರಾಮದ 160 ಎಕರೆ-10 ಗುಂಟೆ-14 ಅಣೆ ಕ್ಷೇತ್ರದ ವಿಸ್ತೀರ್ಣದಲ್ಲಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಿಲಾಗಿರುತ್ತದೆ. ಯೋಜನೆ ಸಂಖ್ಯೆ-61ರ ಹೊಸ ಬಡಾವಣೆಗೆ ಈಗಾಗಲೇ ಸರಕಾರದಿಂದ ಅನುಮೋದನೆ ಸಿಕ್ಕಿದೆ. ಈ ಯೋಜನೆಯಲ್ಲಿ ವಿವಿಧ ಅಳತೆಯ ಜಿ-3 ಮಾದರಿಯ ನಿವೇಶನಗಳನ್ನು ರೂಪಿಸಲು ಉದ್ದೇಶಿಸಿಲಾಗಿದೆ ಹಾಗೂ ಒಟ್ಟು 24 ಎಕರೆ -20 ಗುಂಟೆ ವಿಸ್ತೀರ್ಣದ 2760 ವಿವಿಧ ಅಳತೆಯ ಮನೆಗಳ ಒಟ್ಟು ಸಂಕೀರ್ಣಗಳ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಪ್ರತಿ ಮನೆಗೆ ಒಂದರಂತೆ 9,65,000 ರೂಪಾಯಿಯಂತೆ ಒಟ್ಟು 350 ಕೋಟಿ ರೂ. ವೆಚ್ಚದ ಮೊತ್ತವನ್ನು ಅಂದಾಜಿಸಲಾಗಿದೆ.

ಅದೇ ರೀತಿ ಹಾಕಿ ಇಂಡಿಯಾ ಬೆಳಗಾವಿಗೆ ಇಂಟರ್‍ನ್ಯಾಶನಲ್ ಹಾಕಿ ಮೈದಾನ ನಿರ್ಮಿಸುವ ಸಂಬಂಧ ರಾಮತೀರ್ಥ ನಗರ ಕಣಬರಗಿ ಗ್ರಾಮದ 40000 ಚ.ಮೀ ಖುಲ್ಲಾ ಜಾಗೆ ನೀಡಲಾಗಿದೆ.
ಅದೇ ರೀತಿ ದಕ್ಷಿಣ ಕ್ಷೇತ್ರದಲ್ಲಿ ರೂ. 2863.50 ಅಂದಾಜು ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರದಿಂದ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳ ಅನುμÁ್ಠನಕ್ಕಾಗಿ ಟೆಂಡರ್ ಕರೆಯಲಾಗಿದೆ. ನಗರದ ಶಿವಾಜಿ ಉದ್ಯಾನವನದಲ್ಲಿ ಸುಮಾರು 5 ಕೋಟಿ ಅಂದಾಜು ವೆಚ್ಚದಲ್ಲಿ ಶಿವ ಚರಿತ್ರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ನಗರದಲ್ಲಿ 5 ಕೋಟಿ ವೆಚ್ಛದಲ್ಲಿ ಉದ್ಯಾನವನ ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ರೀತಿ ಕುಮಾರಸ್ವಾಮಿ ಲೇಔಟ್‍ನಲ್ಲಿ 5 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಮುಗಿಯುವ ಹಂತದಲ್ಲಿದ್ದು, ಶೀಘ್ರವೇ ಬಡಾವಣೆಯ್ನು ಪಾಲಿಕೆಗೆ ಹಸ್ತಾಂತರ ಮಾಡುತ್ತೇವೆ.

ಅದೇ ರೀತಿ ಬೆಳಗಾವಿ ನಗರದಲ್ಲಿ ಇನ್ನು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು.ಬುಡಾ ಅಧ್ಯಕ್ಷನಾಗಿ ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಬುಡಾದಿಂದ ಅಭಿವೃದ್ಧಿ ಕೆಲಸಗಳು ನಾಗಾಲೋಟದಿಂದ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನಂತೆ 2022ಕ್ಕೆ ಎಲ್ಲರಿಗೂ ಸೂರು ಒದಗಿಸಲಾಗುತ್ತದೆ. ಬರುವ ದಿನಗಳಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಇದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಬುಡಾ ಅನುಪಮ ಕಾಣಿಕೆ ನೀಡಲಿದೆ ಎಂದು ಘೂಳಪ್ಪ ಹೊಸಮನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Tags:

error: Content is protected !!