Belagavi

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಲ್ಲ ರೀತಿಯ ಸೌಲಭ್ಯ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭರವಸೆ

Share

ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯನ್ನು ಆದರ್ಶವಾಗಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡುವ ದಿಸೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಮಾರುತಿ ನಗರದಲ್ಲಿ ಸಮಾಜ ಸುಧಾರಕಿ ಹಾಗೂ ಅಕ್ಷರದವ್ವ ಖ್ಯಾತಿಯ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ನಮನವನ್ನು ಸಲ್ಲಿಸಿ, ನೂತನವಾಗಿ ನಿರ್ಮಾಣಗೊಂಡ ಸಿಸಿ ರಸ್ತೆಯನ್ನು ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಉದ್ಘಾಟಿಸಿ ಶಾಶಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಲು ಯಾರೂ ಹಿಂದೇಟು ಹಾಕಬಾರದು. ಸಾವಿತ್ರಿ ಬಾಯಿ ಫುಲೆ ಎಂತಹ ಕಷ್ಟಗಳನ್ನು ಎದುರಿಸಿ ಶಿಕ್ಷಣ ಪಡೆದು ಸಮಾಜ ಸುಧಾರಣೆಗೆ ಕಾರಣರಾದರು ಎನ್ನುವ ಆದರ್ಶ ನಮ್ಮ ಮುಂದಿದೆ. ಹಾಗಾಗಿ ನಾವೆಲ್ಲ ಅದೇ ದಾರಿಯಲ್ಲಿ ಮುನ್ನಡೆಯಬೇಕು ಎಂದರು.


ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ಪರಿಹರಿಸಲಾಗುತ್ತಿದೆ. ಇಡೀ ಕ್ಷೇತ್ರವನ್ನು ಆದರ್ಶವನ್ನಾಗಿ ಮಾಡುವ ನನ್ನ ಸಂಕಲ್ಪದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತಿದೆ. ಎಲ್ಲರ ಪೆÇ್ರೀತ್ಸಾಹ ದೊರೆಯುತ್ತಿದೆ. ಇದು ಹೀಗೆಯೇ ಮುಂದುವರಿಯಲಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಗುಲಾಬಿ ಅ ಕೋಲಕಾರ, ಅಪ್ಸರ್ ಜಮಾದಾರ, ಅಬೇದಾ ಸನದಿ, ಇಸ್ಮಾಯಿಲ್, ಹೊನಗೌಡ, ರಸೂಲ್, ಸಿಮಣ್ಣ, ಶಿವಪ್ಪ ಪೂಜೇರಿ, ಸುರೇಶ ವರ್ಧಮಾನ, ಪ್ರೇಮ ಕೋಲಕಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Tags:

error: Content is protected !!