ಬೆಳಗಾವಿಯ ಪ್ರಮುಖ ವೃತ್ತವಾದ ಗೋವಾವೇಸ್ ಸರ್ಕಲ್ನಲ್ಲಿ ಪದೇ ಪದೇ ಸಂಭವಿಸುತ್ತಿದ್ದ ರಸ್ತೆ ಅಪಘಾತಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ವಾರ್ಡ್ ಕಮಿಟಿ ಹಾಗೂ ಸಂಚಾರ ಪೊಲೀಸರ ಮಾರ್ಗದರ್ಶನದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ನಗರಸೇವಕ ನಿತಿನ್ ಜಾಧವ್ ಇಂದು ಚಾಲನೆ ನೀಡಿದ್ದಾರೆ.

ಬೆಳಗಾವಿಯ ಗೋವಾವೇಸ್ ಸರ್ಕಲ್ ಬಳಿ ರಸ್ತೆಗಳ ನಡುವೆ ಇದ್ದ ಅಂತರ ಹಾಗೂ ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು ಮತ್ತು ಇಲ್ಲಿ ಹಲವು ಅಪಘಾತಗಳು ಕೂಡ ಸಂಭವಿಸುತ್ತಿದ್ದವು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಗುಂಡಿಗಳನ್ನು ಮುಚ್ಚುವಂತೆ ಸಂಚಾರ ಪೊಲೀಸ್ ಅಧಿಕಾರಿಗಳು ಕೂಡ ಗಮನಕ್ಕೆ ತಂದಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸ್ಥಳೀಯ ಕಾರ್ಪೊರೇಟರ್ ನಿತಿನ್ ಜಾಧವ್ ಅವರು, ವಾರ್ಡ್ ಕಮಿಟಿ ಹಾಗೂ ಸಂಚಾರ ಪೊಲೀಸರ ಮಾರ್ಗದರ್ಶನದಲ್ಲಿ ಇಂದಿನಿಂದ ವಾರ್ಡ್ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಆರಂಭಿಸಿದ್ದಾರೆ.
ವಿಶೇಷವಾಗಿ ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದ ಗೋವಾವೇಸ್ ಸರ್ಕಲ್ನ ಆ ಅಪಾಯಕಾರಿ ಜಾಗವನ್ನು ಇಂದು ಸಂಪೂರ್ಣವಾಗಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಅಥವಾ ಅಪಘಾತಗಳಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಾರ್ಡ್ನ ಉಳಿದ ಭಾಗಗಳಲ್ಲಿರುವ ರಸ್ತೆ ಗುಂಡಿಗಳನ್ನೂ ಹಂತ ಹಂತವಾಗಿ ಮುಚ್ಚಲಾಗುವುದು ಎಂದು ನಿತಿನ್ ಜಾಧವ್ ಭರವಸೆ ನೀಡಿದ್ದಾರೆ.
