State

ಜಪಾನ್‌ನಲ್ಲಿ ಕನ್ನಡಿಗರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಆತ್ಮೀಯ ಮಾತುಕತೆ

Share

ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಲ್ಲಿನ ಕನ್ನಡಿಗರೊಂದಿಗೆ ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ವಿದೇಶದಲ್ಲಿದ್ದರೂ ಕನ್ನಡತನ ಮರೆಯದ ಕನ್ನಡಿಗರೊಂದಿಗೆ ಸಿಎಂ ಮಾತುಕತೆ ನಡೆಸಿದರು.

ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೋ ಕನ್ನಡ ಬಳಗದ ಸದಸ್ಯರನ್ನು ಭೇಟಿಯಾಗಿ ಆತ್ಮೀಯವಾಗಿ ಸಮಯ ಕಳೆದರು. ಈ ಸಂದರ್ಭದಲ್ಲಿ ಕನ್ನಡಿಗರ ಯೋಗಕ್ಷೇಮವನ್ನು ವಿಚಾರಿಸಿದ ಸಿಎಂ, ಜಪಾನ್‌ನಲ್ಲಿನ ಅವರ ಬದುಕು ಮತ್ತು ಅನುಭವಗಳ ಕುರಿತು ಕುಶಲೋಪಹಂಚಿಕೊಂಡರು.

ಇದೇ ವೇಳೆ ಜಪಾನ್‌ನಲ್ಲಿ ಕನ್ನಡಿಗರು ನಡೆಸುತ್ತಿರುವ ವಿವಿಧ ಸಂಘಟನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ತಾಯ್ನಾಡಿನೊಂದಿಗಿನ ಒಡನಾಟ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕುರಿತು ಸದಸ್ಯರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದರು.

Tags:

error: Content is protected !!