Chikkodi

ಅಂಕಲಿಯ ನಿಖಿತಾ ಕಂಕಣವಾಡಿ ವಿಜ್ಞಾನಿಯಾಗಿ ನೇಮಕ

Share

ತಾಲೂಕಿನ ಅಂಕಲಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ನಿಖಿತಾ ಕಂಕಣವಾಡಿ ಅವರು ಅಖಿಲ ಭಾರತ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಹಿರಿಯ ಸಂಶೋಧನಾ ಫೆಲೋಶಿಪ್ (SRF) ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ (AIR-1) ಪಡೆದಿರುವ ಅವರು, ಇದೀಗ ಭಾರತ ಸರ್ಕಾರದ ಜವಳಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯಲ್ಲಿ (Central Silk Board) ‘ವಿಜ್ಞಾನಿ-ಬಿ’ (Scientist-B) ಹುದ್ದೆಗೆ ನೇಮಕಗೊಂಡಿದ್ದಾರೆ.

ರೇಷ್ಮೆ ಕೃಷಿ (Sericulture) ವಿಷಯದಲ್ಲಿ ಎಂ.ಎಸ್ಸಿ. (ಕೃಷಿ) ಪದವಿ ಪಡೆದಿರುವ ನಿಖಿತಾ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ಶೈಕ್ಷಣಿಕ ಶ್ರೇಷ್ಠತೆಯಿಂದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಪ್ರತಿಷ್ಠಿತ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ವಿಜ್ಞಾನಿ ಹುದ್ದೆಗೆ ಆಯ್ಕೆಯಾಗಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.

ಅಂಕಲಿ ಗ್ರಾಮದ ಹೆಮ್ಮೆಯ ಪುತ್ರಿಯ ಈ ಅಸಾಧಾರಣ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು, ಶಿಕ್ಷಕರು ಹಾಗೂ ಚಿಕ್ಕೋಡಿ ಭಾಗದ ಜನರಿಂದ ಹರ್ಷ ವ್ಯಕ್ತವಾಗಿದ್ದು, ವ್ಯಾಪಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Tags:

error: Content is protected !!