ನವೆಂಬರ್ ತಿಂಗಳಲ್ಲಿ ಮಾತ್ರ ರಾಜ್ಯೋತ್ಸವ ಆಚರಿಸದೆ ಪರ್ಷ ಪೂರ್ತಿ ನಮ್ಮ ಮನ ಮನೆಯಲ್ಲಿ ಕನ್ನಡ ಉಬ್ಬವನ್ನು ಆಚರಿಸಬೇಕು ಎಂದು ಉದ್ಯಮಿ ಪೃಥ್ವಿ ಕತ್ತಿ ಹೇಳಿದರು.

ಹುಕ್ಕೇರಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಬಣದ ಕಾರ್ಯಕರ್ತರು ಹಮ್ಮಿಕೊಂಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ಮತ್ತು ಅಭಿನವ ಮಂಜುನಾಥ ದೇವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ನಾಡ ದೇವಿ ಭುವನೇಶ್ವರಿ ಪೂರ್ತಿಗೆ ಪೂಜೆ ಸಲ್ಲಸಿ ಚಾಲನೆ ನೀಡಲಾಯಿತು.
ಉದ್ಯಮಿ ಪೃಥ್ವಿ ಕತ್ತಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಅನ್ಯ ಭಾಷಿಕರನ್ನು ಪ್ರೀತಿಯಿಂದ ಕಂಡು ಕನ್ನಡ ಮಾತನಾಡಲು ಪ್ರೇರೆಪಿಸ ಬೇಕು ಎಂದರು
ಡಿ ಜೇ ಸಂಗೀತಕ್ಕೆ ಚಾಲನೆ ನೀಡಿದ ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಗ್ರಂಥಗಳನ್ನು ಓದುವ ಮೂಲಕ ನಾಡಿನ ನೆಲ ಜಲ ರಕ್ಷಣೆಗೆ ಬದ್ದರಾಗ ಬೇಕು ಎಂದರು

ನಂತರ ಶ್ರೀಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಅದ್ಯಕ್ಷ ಪ್ರಕಾಶ ಅವಲಕ್ಕಿ, ಮುಖಂಡರಾದ ಉದಯ ಹುಕ್ಕೇರಿ, ಪ್ರಜ್ವಲ ನಿಲಜಗಿ, ಸುನಿಲ ಭೈರನ್ನವರ, ಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿ ಘಟಕದ ಅದ್ಯಕ್ಷರಾದ ಪ್ರಮೋದ ಕೂಗೆ, ಪ್ರದೀಪ ರಿಜಕನವರ, ರಾಬೀನ್ ಕೌಜಲಗಿ, ಶಾಂತಿನಾಥ ಮಗದುಮ್ಮ, ಸೌರಭ ತಳವಾರ, ವಿಲ್ಸನ್ ಕೌಜಲಗಿ, ರಿಹಾನ್ ಚಟ್ಟರಕಿ, ದ್ಯಾನೇಶ್ವರ ಗೌಡರ ಮೋದಲಾದವರು ಉಪಸ್ಥಿತರಿದ್ದರು.
ತಡ ರಾತ್ರಿ ವರಗೆ ಹುಕ್ಕೇರಿ ನಗರದಲ್ಲಿ ಡಿ ಜೆ ಸೌಂಡಿಗೆ ಯುವಕರು ಹೆಜ್ಜೆ ಹಾಕಿದರು, ಯಾವುದೇ ಅಹಿತಕರ ಘಟನೆ ಜರುಗದಂತೆ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಶಿವ ಶಂಕರ ಗಣಾಚಾರಿ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೊ ಬಸ್ತ ನಿಯೋಜಿಸಲಾಗಿತ್ತು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
