Belagavi

ಹಿಡಕಲ್ ಜಲಾಶಯದ ಕುಡಿಯುವ ನೀರಿನ ಹರಿವು

Share

ಹಿಡಕಲ್ ಡ್ಯಾಂನಿಂದ ನದಿಗೆ ಬಿಡುಗಡೆ ಮಾಡಲಾದ ಕುಡಿಯುವ ನೀರು ಗೋಕಾಕದಿಂದ ಬಾಗಲಕೋಟೆವರೆಗೆ ಯಶಸ್ವಿಯಾಗಿ ತಲುಪಿದೆ. ಈ ಕುರಿತು ಖುದ್ದು ಸಚಿವ ಸತೀಶ್ ಜಾರಕಿಹೊಳಿ ಅವರು ಹೆಲಿಕಾಪ್ಟರ್ ಮೂಲಕ ನೀರಿನ ಹರಿವನ್ನು ಪರಿಶೀಲಿಸಿದ್ದು, ಸಾರ್ವಜನಿಕರಲ್ಲಿ ಕುಡಿಯುವ ನೀರಿನ ಚಿಂತೆ ದೂರವಾಗಿದೆ.

ಹಿಡಕಲ್ ಜಲಾಶಯದಿಂದ ನದಿಗೆ ಬಿಡುಗಡೆ ಮಾಡಲಾದ ಕುಡಿಯುವ ನೀರು ಗೋಕಾಕ ಮಾರ್ಗವಾಗಿ ಬಾಗಲಕೋಟೆವರೆಗೆ ತಲುಪಿರುವ ಕುರಿತು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೆಲಿಕಾಪ್ಟರ್ ಮೂಲಕ ವೈಮಾನಿಕ ವೀಕ್ಷಣೆ ನಡೆಸಿ, ನೀರಿನ ಹರಿವಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉಪಸ್ಥಿತರಿದ್ದು, ನದಿ ಪಾತ್ರದ ಜನರಿಗೆ ಕುಡಿಯುವ ನೀರು ಸುಗಮವಾಗಿ ಪೂರೈಕೆಯಾಗುತ್ತಿರುವುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.

Tags:

error: Content is protected !!