ಸದೃಢವಾದ ದೇಶ ಕಟ್ಟಲು ಯುವಕರ ಪಾತ್ರ ಮತ್ತು ಸಂಪನ್ಮೂಲಗಳ ಬಳಕೆ ಬಹು ಮುಖ್ಯವಾಗಿದೆ ಎಂದು ಹುಕ್ಕೇರಿ ಸಿವ್ಹಿಲ ಮ್ಯಾಯಾಧೀಶ ಆದಿತ್ಯ ಕಲಾಲ ಹೇಳಿದರು.

ಹುಕ್ಕೇರಿ ಸಾರ್ವಜನಿಕ ಶಿಕ್ಷಣ ಇಲಾಖೆ , ಆರೋಗ್ಯ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ನಶಾ ಮುಕ್ತ ಭಾರತ ಎಂಬ ಕಾರ್ಯಕ್ರಮ ವನ್ನು ನಗರದ ಗಾಂಧಿ ನಗರ ಶಾಲೆಯಲ್ಲಿ ತಹಸಿಲ್ದಾರ ಬಲರಾಮ ಕಟ್ಟಿಮನಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ನ್ಯಾಯಾಧೀಶ ಆದಿತ್ಯ ಕಲಾಲ ಮಾತನಾಡಿ ನಮ್ಮ ದೇಶವನ್ನು ಸದೃಡವಾಗಿ ಕಟ್ಟಲು ಯುವಕರ ಪಾತ್ರ ಮುಖ್ಯವಾಗಿದ್ದು ಆದರೆ ಯುವ ಜನಾಂಗಕ್ಕೆ ಸುಲಭವಾಗಿ ಸಶಾ ಪದಾರ್ಥಗಳು ಸಿಗುತ್ತಿರುವದು ಕಳವಳಕಾರಿ ವಿಷಯವಾಗಿದೆ ಕಾರಣ ಯುವಕರು ಚಟಗಳಿಗೆ ಬಲಿಯಾಗದೆ ನಮ್ಮ ನಿಮ್ಮ ಆರೋಗ್ಯ ಮತ್ತು ಉತ್ತಮ ದೇಶ ಕಟ್ಟಲು ಮುಂದಾಗಬೇಕು ಎಂದರು

ವೇದಿಕೆ ಮೇಲೆ ಬಿ ಇ ಓ ರೇವತಿ ಮಠದ, ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಗಣಾಚಾರಿ, ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತ ಪಾವಟೆ ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.

ತಾಲೂಕಾ ಆರೋಗ್ಯ ಅಧಿಕಾರಿ ಶ್ರೀಮತಿ ಪೂರ್ಣಿಮಾ ತಲ್ಲೂರ ಮಾತನಾಡಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗದೆ ಕಷ್ಟ ಸುಖಗಳನ್ನು ಎದುರಿಸಿ ತಮ್ಮ ಗುರಿ ತಲುಪುವ ದಾರಿಯಲ್ಲಿ ನಡೆಯಬೇಕು ಎಂದರು
ಈ ಸಂದರ್ಭದಲ್ಲಿ ಹುಕ್ಕೇರಿ ಗಾಂಧಿನಗರ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಕು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
