ಬೇಡಕಿಹಾಳ-ಗಳತಾಗಾ ಮಾರ್ಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿ, ಸುಮಾರು 36 ಎಕರೆ ಪ್ರದೇಶದ ಕಬ್ಬು ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ಸಂಭವಿಸಿದೆ.
ಈ ದುರ್ಘಟನೆಯಿಂದ ಭಾವುಸಾಬ ಲಟ್ಟಿ, ಚಂದ್ರಕಾಂತ, ರವೀಂದ್ರ, ಅರ್ಚನಾ ಹಾಗೂ ಸಾರಿಕಾ ಚವ್ಮಾಣ, ವಸಂತ, ಜಯವಂತ, ಪಂಢರಿನಾಥ, ಮುರಳಿ ಬಾಬರ, ಕಾಂತಿನಾಥ ಚೌಗುಲೆ, ಬಿರ್, ಗಜಾನನ ಕಾಕಡೆ, ಉತ್ತಮ ಹಾಗೂ ವಿಲಾಸ ಘೋಡಕೆ, ಪ್ರಕಾಶ, ಮಹೇಶ ಕಾಕಡೆ, ಬಾಬು ಕಾಕಡೆ, ನಾರಾಯಣ ಕಡಕ್ಕೋಡೆ, ಮಹಾವೀರ, ಕುಮಾರ, ಅದಗೌಡ ಹಾಗೂ ಸಂತೋಷ ಪಾಟೀಲ (ಕೋಣಪ್ಪ) ಸೇರಿದಂತೆ ಮುಂತಾದ ರೈತರ ಕಬ್ಬು ಸುಟ್ಟು ಹೋಗಿದೆ.
ಕಬ್ಬಿನ ಜೊತೆಗೆ ಹೊಲದಲ್ಲಿದ್ದ ಹನಿ ನೀರಾವರಿ ಪೈಪ್ಗಳು ಹಾಗೂ ಕೇಬಲ್ಗಳು ಸಹ ಬೆಂಕಾಹುತಿಯಾಗಿವೆ. ಬೆಂಕಿಯ ನಾಲಿಗೆಗೆ ಸುತ-ಮುತ್ತಲಿನ ರೈತರು, ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಹಾಗೂ ಸದಲಗಾ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಎಸ್.ಎನ್. ನೇಮಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಹೆಸ್ಕಾಂ ಅಧಿಕಾರಿಗಳಾದ ಪೂಜಾರಿ ಮತ್ತು ಮಡಿವಾಳ, ಕೃಷಿ ಇಲಾಖೆ ಅಧಿಕಾರಿ ಕಾಜಲಗಿ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು ಹಾಗೂ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರ್.ಜಿ. ಮಲಗೌಡ ಪಾಟೀಲ, ಬಾಳಾಸಾಹೇಬ ಶಿಂಧೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
