ಮುಂಬರುವ ಬೇಸಿಗೆ ಕಾಲದಲ್ಲಿ ಹುಕ್ಕೇರಿ ಮತ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಬಾರದಂತೆ ಕ್ರಮ ವಹಿಸ ಬೇಕು ಎಂದು ಅಧಿಕಾರಿಗಳಿಗೆ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಸೂಚಿಸಿದರು.

ಹುಕ್ಕೇರಿ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ಎರಡನೇ ತ್ರೈಮಾಸಿಕ ಪ್ರಗತಿ ಪರಶಿಲನಾ ಸಭೆಯು ಶಾಸಕ ನಿಖಿಲ್ ಕತ್ತಿ ಅದ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಶಾಸಕರಿಗೆ ಸ್ವಾಗತಿಸಿ ಅಭಿನಂದಿಸಿದರು.
ತಹಸಿಲ್ದಾರ ಬಲರಾಮ ಕಟ್ಟಿಮನಿ, ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಶಾನೂಲ ತಹಸಿಲ್ದಾರ, ಪ್ರಕಾಶ ಗಾವಡಿ ಉಪಸ್ಥಿತರಿದ್ದರು.
ಶಾಸಕ ನಿಖಿಲ್ ಕತ್ತಿ ಪ್ರತಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಂಭಂದಿಸಿದ ಇಲಾಖೆ ಅಧಿಕಾರಿಗಳಿಗೆ ಪ್ರಗತಿ ಕುರಿತು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅನುಷ್ಟಾನ ಅಧಿಕಾರಿಗಳಾದ ರಾಜು ಮೇತ್ರಿ, ಮಹಾದೇವ ಪಟಗುಂದಿ, ಡಾ, ಮಹಾಂತೇಶ ನರಸನ್ನವರ, ರಾಜಶೇಖರ ಪಾಟೀಲ, ಅವ೮ನಾಶ ಹೋಳೆಪ್ಪಗೋಳ, ಗುರುಶಾಂತ ಗುರುಶಾಂತ ಪಾವಟೆ, ಈಶ್ವರ ಸಿದ್ನಾಳ, ಶ್ರೀಮತಿ ರೇವತಿ ಮಠದ, ಪ್ರಕಾಶ ಮಠದ, ಪ್ರವೀಣ ಮಾಡ್ಯಾಳ ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
