ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಾಡಪ್ಪ ಪರಶುರಾಮ್ ಗಾಡೀವಡ್ಡರ ಇವರಿಗೆ ಹುಕ್ಕೇರಿ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಕೊಣ್ಣೂರು ಮರಡಿಮಠದ ಶ್ರೀ ಷ ಬ್ರ ಡಾ. ಪವಾಡೇಶ್ವರ ಶಿವಾಚಾರ್ಯ ಸ್ವಾಮಿಗಳವರು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಕಾಡಪ್ಪ ಗಾಡೀವಡ್ಡರ ಅವರಿಗೆ ಕರ್ನಾಟಕ ಘನ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮಗೆ ಅತೀವ ಸಂತೋಷ ವನ್ನು ತಂದಿದೆ. 2014 ರಲ್ಲಿ ಸಚಿವರಾಗಿದ್ದ ದಿ. ಉಮೇಶ್ ಕತ್ತಿ ಅವರ ನೇತೃತ್ವದಲ್ಲಿ ಮಾಜಿ ಸಚಿವರಾಗಿದ್ದ ಮಲ್ಲಾರಿಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಗುರುಶಾಂತೇಶ್ವರ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದನ್ನು ಸ್ಮರಿಸಿದ ಶ್ರೀಗಳು ಒಬ್ಬ ಅಪರೂಪದ ಕಲಾವಿದ ರನ್ನು ಗುರುತಿಸಿ ಆಶೀರ್ವದಿಸಿರುವುದು ನಮಗೆ ಸಂತಸ ತಂದಿದೆ ಎಂದರು.
ಕೊಣ್ಣೂರು ಮರಡಿಮಠದ ಡಾ. ಪವಾಡೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಡಪ್ಪ ಗಾಡೀವಡ್ಡರ ಅವರು ಕೊಣ್ಣೂರು ಮರಡಿ ಮಠದ ಪರಮ ಶಿಷ್ಯರು. ಇವತ್ತು ಶ್ರೀಮಠದ ಶಿಷ್ಯನಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ನಮಗೆ ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಡಪ್ಪ ಗಾಡೀವಡ್ಡರ ಅವರು ಇವತ್ತು ಪ್ರಶಸ್ತಿ ಲಭಿಸಿದ ಪ್ರಯುಕ್ತ ಶ್ರೀಗಳು ನನಗೆ ಸನ್ಮಾನಿಸಿದ್ದಾರೆ. ಅವರ ಆಶೀರ್ವಾದ ಸದಾ ಇರಲಿ ಎಂದರು. ಶ್ರೀಮಠದ ಶಿಶ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
