ಮುಂಬೈನ ಪ್ರತಿಷ್ಠಿತ ಕಲಾ ಗ್ಯಾಲರಿಯಲ್ಲಿ ಬೆಳಗಾವಿಯ ಪ್ರತಿಭಾವಂತ ಚಿತ್ರಕಾರ ಮಹೇಶ ಹೊನುಲೆ ಅವರ ಸುಂದರ ವರ್ಣಚಿತ್ರಗಳ ಪ್ರದರ್ಶನವು ಕಲಾಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ದೇಶ-ವಿದೇಶಗಳ ವಿವಿಧ ರಮಣೀಯ ಸ್ಥಳಗಳ ಕಲಾ ಸೌಂದರ್ಯವನ್ನು ಬಿಂಬಿಸುವ ಈ ಅಪೂರ್ವ ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದ್ದಾರೆ.

ಬೆಳಗಾವಿಯ ಹೆಸರಾಂತ ಚಿತ್ರಕಾರ ಮಹೇಶ ಹೊನುಲೆ ಅವರ ಕಲಾಕೃತಿಗಳ ಪ್ರದರ್ಶನವು ಮುಂಬೈನ ‘ಕಲಾ ಘೋಡಾ ದಿ ಆರ್ಟ್ ಎಂಟ್ರನ್ಸ್ ಗ್ಯಾಲರಿ’ಯಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ನ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸೃಜನಶೀಲ ಚಲನಚಿತ್ರ ನಿರ್ದೇಶಕ ದೀಪಕ್ ಎಸ್.ವಿ. ಹಾಗೂ ವಿಶ್ವವಿಖ್ಯಾತ ಜಲವರ್ಣ ಚಿತ್ರಕಾರ ವಿಕಾಸ ಪಾಟಣೇಕರ್ ಅವರು ಈ ಪ್ರದರ್ಶನವನ್ನು ಉದ್ಘಾಟಿಸಿದರು. ನವೆಂಬರ್ 16ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 7:30ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುವ ಈ ಪ್ರದರ್ಶನದಲ್ಲಿ, ಜಲವರ್ಣ ಮತ್ತು ಅಕ್ರಾಲಿಕ್ ಮಾಧ್ಯಮದಲ್ಲಿ ಮೂಡಿಬಂದಿರುವ 30ಕ್ಕೂ ಹೆಚ್ಚು ಆಕರ್ಷಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ವಿಶೇಷವಾಗಿ ಕೊಂಕಣ, ಬೆಳಗಾವಿ, ನೇಪಾಳ, ಹಂಪಿ, ಶಿಮ್ಲಾ, ಗೋವಾ ಮತ್ತು ಬದಾಮಿ ಭಾಗಗಳ ರಮಣೀಯ ದೃಶ್ಯಗಳನ್ನು ಇಲ್ಲಿ ಸುಂದರವಾಗಿ ಸೆರೆಹಿಡಿಯಲಾಗಿದೆ.
