Belagavi

ಬೆಳಗಾವಿಯಲ್ಲಿ ಸಂಭ್ರಮದ ದೀಪಾವಳಿ

Share

ದೀಪಾವಳಿ ಹಬ್ಬದ ಸಂಭ್ರಮ ಕಳೆಕಟ್ಟಿದ್ದು, ಲಕ್ಷ್ಮಿ ಪೂಜೆಗಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಬೆಳಗಾವಿಯ ಮಾರುಕಟ್ಟೆಯಲ್ಲಿ ನಾಗರಿಕರು ಮತ್ತು ಮಹಿಳಾ ವೃಂದದವರ ಭಾರಿ ಜನಸಂದಣಿ ಕಂಡುಬಂದಿದೆ. ಹೂವು, ಹಾರಗಳು, ಬಾಳೆ ಕಂಬ ಹಾಗೂ ಕಬ್ಬು ಖರೀದಿಗೆ ವಿಶೇಷ ಬೇಡಿಕೆI ವ್ಯಕ್ತವಾಗಿದ್ದು, ಇಡೀ ಮಾರುಕಟ್ಟೆಗೆ ಅಕ್ಷರಶಃ ಜಾತ್ರೆಯ ಸ್ವರೂಪ ಪ್ರಾಪ್ತವಾಗಿದೆ.

ದೀಪಾವಳಿ ಹಬ್ಬದ ಪ್ರಮುಖ ಭಾಗವಾದ ಲಕ್ಷ್ಮಿ ಪೂಜೆಯ ಸಿದ್ಧತೆಗಳು ಈಗ ಅಂತಿಮ ಹಂತಕ್ಕೆ ತಲುಪಿವೆ. ಈ ಶುಭ ಸಂದರ್ಭದಲ್ಲಿ ಪೂಜೆಗೆ ಬೇಕಾಗುವ ವಿವಿಧ ಬಗೆಯ ತಾಜಾ ಹೂವುಗಳು, ಆಕರ್ಷಕ ಹೂವಿನ ಹಾರಗಳು, ಪೂಜೆಗೆ ಅವಶ್ಯವಿರುವ ಬಾಳೆ ಗಿಡಗಳು, ಕಬ್ಬು ಹಾಗೂ ಇತರ ಧಾರ್ಮಿಕ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಬೆಳಗಾವಿಯ ಮುಖ್ಯ ಮಾರುಕಟ್ಟೆಗಳಲ್ಲಿ ಜನಸಾಗರವೇ ಹರಿದುಬಂದಿದೆ. ಮಾರುಕಟ್ಟೆಯಾದ್ಯಂತ ವಿಶೇಷವಾದ ಉತ್ಸಾಹ ಹಾಗೂ ಹಬ್ಬದ ಕಳೆ ಮನೆ ಮಾಡಿದ್ದು, ಮಾರಾಟಗಾರರು ಕೂಡ ವಿವಿಧೆಡೆ ಬೃಹತ್ ಸ್ಟಾಲ್‌ಗಳನ್ನು ಹಾಗೂ ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಿದ್ದಾರೆ.

ಮನೆಗಳ ಶುಚೀಕರಣ ಮತ್ತು ಅಲಂಕಾರದ ಬೆನ್ನಲ್ಲೇ ಲಕ್ಷ್ಮೀ ಪೂಜೆಗಾಗಿ ಮುಂಜಾನೆಯಿಂದಲೇ ಮಾರುಕಟ್ಟೆಗೆ ಆಗಮಿಸುತ್ತಿರುವ ಸಾರ್ವಜನಿಕರಿಂದಾಗಿ ಅಂಗಡಿ ಮುಂಗಟ್ಟುಗಳು ಗಜಿಬಿಜಿಯಿಂದ ಕೂಡಿವೆ. ವಿಶೇಷವಾಗಿ ಸಾಂಪ್ರದಾಯಿಕ ಪೂಜಾ ದ್ರವ್ಯಗಳು ಮತ್ತು ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿ ಸಾಗಿದ್ದು, ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ. ಹಬ್ಬದ ಈ ಮಂಗಳಕರ ಹಾಗೂ ಸಡಗರದ ವಾತಾವರಣದಿಂದಾಗಿ ಬೆಳಗಾವಿಯ ವಾಣಿಜ್ಯ ನಗರಿಯ ಮಾರುಕಟ್ಟೆ ಪ್ರದೇಶವು ಕಳೆಗಟ್ಟಿದ್ದು, ಎಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದೆ.

Tags:

error: Content is protected !!