ಬೆಳಗಾವಿಯ ಪ್ರಸಿದ್ಧ ಶಾಂತಾಯಿ ವೃದ್ಧಾಶ್ರಮದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಮಾರಿಯಾ ವಿಜಯ ಮೋರೆ ಅವರು ಸರ್ವಾನುಮತದಿಂದ ನೇಮಕಗೊಂಡಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಿರಿಯ ಜೀವಗಳ ಸೇವೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ (ಶಾಂತಾಯಿ ಸೆಕೆಂಡ್ ಚೈಲ್ಡ್ಹುಡ್) ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರಾದ ವಿಜಯ ಪಾಟೀಲ ಹಾಗೂ ಕಾರ್ಯಾಧ್ಯಕ್ಷರಾದ ವಿಜಯ ಮೋರೆ ಅವರ ಸಮ್ಮುಖದಲ್ಲಿ ಮಾರಿಯಾ ವಿಜಯ ಮೋರೆ ಅವರನ್ನು ನೂತನ ಸಿಇಒ ಆಗಿ ಆಯ್ಕೆ ಮಾಡಲಾಯಿತು. ವೃದ್ಧಾಶ್ರಮದ ಆಶ್ರಯದಲ್ಲಿರುವ ಹಿರಿಯ ಜೀವಗಳ ಕಾಳಜಿ, ಆರೈಕೆ ಹಾಗೂ ಸಮಾಜಮುಖಿ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಮರಿಯಾ ಅವರ ಶ್ರಮವನ್ನು ಗುರುತಿಸಿ ಈ ಜವಾಬ್ದಾರಿ ನೀಡಲಾಗಿದೆ. ಪದಗ್ರಹಣದ ಬಳಿಕ ಆಶ್ರಮದ ಪ್ರತಿಯೊಬ್ಬ ಅಜ್ಜ-ಅಜ್ಜಿಯರನ್ನು ಭೇಟಿಯಾದ ಮರಿಯಾ ಅವರು, ಅವರ ಆಶೀರ್ವಾದ ಪಡೆದು ಭಾವುಕರಾಗಿ ತಮ್ಮ ಹೊಸ ಹೊಣೆಗಾರಿಕೆಯನ್ನು ಸ್ವೀಕರಿಸಿದರು. ಈ ನೇಮಕದಿಂದ ಸಂಸ್ಥೆಯ ಆಡಳಿತ ಹಾಗೂ ಹಿರಿಯ ನಾಗರಿಕರ ಸೇವಾ ಕಾರ್ಯಗಳು ಇನ್ಮುಂದೆ ಇನ್ನಷ್ಟು ಸಮರ್ಥವಾಗಿ ನಡೆಯಲಿವೆ ಎಂದು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
