ಪೇಡಾ ನಗರಿ ಧಾರವಾಡದಲ್ಲಿ ಬೆಳಕಿನ ಹಬ್ಬಾ ದೀಪಾವಳಿ ಹಬ್ಬದ ಸಂಭ್ರಮದ ಜೋರಾಗಿದೆ, ಬೆಲೆಗಳ ಏರಿಕೆಯ ಮಧ್ಯೆಯೂ ಜನ ಹನ್ಬದ ಸಾಮಗ್ರಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ದಾರೆ.


ಧಾರವಾಡ ಸುಭಾಷ್ ರಸ್ತೆ ಮಾರು ಕಟ್ಟೆ ಸೇರಿದಂತೆ ಕೆರೆ ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿಗಳ ಮಾವಿನ ತೋರಣ,ಬಾಳೆ ಕಂಬ, ಕಬ್ಬು ಸೇರಿದಂತೆ ಇತರೆ ಹಬ್ಬದ ಸಾಮಗ್ರಿಗಳನ್ನು ಜನ ಖರೀದಿಯಲ್ಲಿ ತೋಡಗಿರುವ ದೃಶ್ಯಗಳು ಸಾಮನ್ಯವಾಗಿವೆ. ಹೂವಿನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸರ್ಕಾರಗಳಿಗೆ ಮನದಲ್ಲಿ ಹೊಡಿ ಶಾಪ ಹಾಕುತ್ತಲೇ ಜನತೆ ಖರೀದಿಯಲ್ಲಿ ತೊಡಗಿದ್ದಾರೆ. ಚೆಂಡು ಹೂವಿನ ದರ 100ಗಡಿ ದಾಟ್ಟಿದ್ದು, ಉಳಿದಂತೆ ಹೂವಿನ ಬೆಲೆಯು ಕೂಡಾ ಏರಿಕೆಯಾಗಿದೆ. ಇನ್ನೂ ಧಾರವಾಡ ಮುಖ್ಯ ಮಾರುಕಟ್ಟೆ ಇದ್ದಾಗಿದ್ದು, ಜನ ಜಂಗಳಿಂದ ಮಾರುಕಟ್ಟೆ ತುಂಬಿಕೊಂಡಿರುವ ದೃಶ್ಯಗಳು ಸಾಮನ್ಯವಾಗಿವೆ.


