Belagavi

ಹಾರೂಗೇರಿಯಲ್ಲಿ ಚಿನ್ನಾಭರಣ ಕದ್ದ ಕಳ್ಳಿಯ ಬಂಧನ

Share

ಬೆಳಗಾವಿ ಜಿಲ್ಲೆಯ ಹಾರುಗೇರಿ ಸಂತೆ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಕೈಚೀಲದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಕಳುವಾಗಿದ್ದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆರೋಪಿಯನ್ನು ದಸ್ತಗಿರಿ ಮಾಡಿ, ಕಳುವಾಗಿದ್ದ ಬಂಗಾರದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ 07/10/2026 ರಂದು ಹಾರುಗೇರಿ ಜನತಾ ಪ್ಲಾಟ್‌ನ ಶಾಂತವ್ವ ಅಪ್ಪಾಸಾಬ ಮೋರೆ ಅವರು ಹಾರುಗೇರಿ ಸಂತೆಯಲ್ಲಿ ಬಾಳೆಹಣ್ಣು ಖರೀದಿಸಲು ಹೋದಾಗ, ಅವರ ಚಾಕೋಲೇಟ್ ಕಲರ್ ಪರ್ಸ್‌ನಲ್ಲಿದ್ದ ಅಂದಾಜು 3.50,000/- ರೂಪಾಯಿ ಕಿಮ್ಮತ್ತಿನ ಚಿನ್ನದ ಅವಲಕ್ಕಿ ಸರ ಹಾಗೂ ಹಣವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾರುಗೇರಿ ಪೊಲೀಸರು ಹಾಗೂ ತನಿಖಾ ತಂಡದ ಸದಸ್ಯರು ದಿನಾಂಕ 04/11/2026 ರಂದು ಸುಲೋಚನಾ ಸಿದ್ದಪ್ಪ ಲೋಂಡೆ ಎಂಬಾಕೆಯನ್ನು ವಶಕ್ಕೆ ಪಡೆದುಕೊಂಡು, ಆರೋಪಿತಳ ಕಡೆಯಿಂದ 3,50,000/- ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Tags:

error: Content is protected !!