hubbali

ನಿದ್ದೆಗಣ್ಣಲ್ಲಿ ಸಾರ್ವಜನಿಕರ ವಾಹನಕ್ಕೆ ಡಿಕ್ಕಿ ಹೊಡೆದ PSI ; ತರಾಟೆ ತೆಗೆದುಕೊಂಡ ಸಾರ್ವಜನಿಕರು

Share

ಹುಬ್ಬಳ್ಳಿಯಲ್ಲಿ PSI ಯೊಬ್ಬರು ನಿದ್ದೆಗಣ್ಣಲ್ಲಿ ಸಾರ್ವಜನಿಕರ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆಯೊಂದು ನಡೆದಿದೆ.

ಉಮೇಶಗೌಡ ಎಂಬ PSI ವಿದ್ಯಾನಗರ ಬಳಿ ಸರಣಿ ಅಪಘಾತ ಮಾಡಿದ್ದಾರೆ. ಡಿಕ್ಕಿ ಹೊಡೆದ ರಬಸಕ್ಕೆ ಕೆಲವೊಂದಿಷ್ಟು ವಾಹನಗಳು ಜಖಂಗೊಂಡಿವೆ. ಅಲ್ಲೆ ಇದ್ದ ಸ್ಥಳೀಯರು PSI ಜೊತೆ ವಾಗ್ವಾದ ಮಾಡಿದ್ದಾರೆ. ಅಪಘಾತ ಮಾಡಿದ PSI ಎಲ್ಲರಿಗೂ ಕ್ಷಮೆ ಕೂಡ ಕೇಳಿದ್ದಾರೆ.

ಇವರ ವರ್ತನೆಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಕೆಲವೊಂದಿಷ್ಟು ಜನರ ಪ್ರಕಾರ ಇವರು ಡ್ರಿಂಕ್ಸ್ ಮಾಡಿದ್ದರು ಎಂದು ಎನ್ನಲಾಗಿದೆ. ಅಷ್ಟಕ್ಕೂ ಅದು ನಿಜಾನಾ..? ಸುಳ್ಳಾ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಎಲ್ಲರನ್ನು ಸಮಾಧಾನಗೋಳಿಸಿದ್ದಾರೆ.

Tags:

error: Content is protected !!