ಪ್ರಕೃತಿ ಗ್ರೂಪ್ ಮತ್ತು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಶೇಷಗಿರಿ ಕ್ಯಾಂಪಸ್, ಬೆಳಗಾವಿ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಸ್ಮಾರ್ಟ್ ವಿಲೇಜ್ ಪರಿಕಲ್ಪನೆಗಳು ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿ” ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು 30 ಮತು 31ನೇ ಅಕ್ಟೋಬರ್ 2026 ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಜರುಗಿತು. ಈ ಸಮ್ಮೇಳನಕ್ಕೆ ಕರ್ನಾಟಕ ಮತ್ತು ಆಂಧ್ರಪ್ರದೇಶ 115 ಪ್ರತಿನಿಧಿಗಳು ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ಮತ್ತು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಗೆ ಸೇರಿದ ತಜ್ಞರು ಭಾಗವಹಿಸಿದ್ದರು.

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ‘ವಿಕಸಿತ ಭಾರತ’ದ ಕನಸನ್ನು ಸಾಕಾರಗೊಳಿಸಲು ಸ್ವಾವಲಂಬಿ ಮತ್ತು ಆರ್ಥಿಕವಾಗಿ ಉತ್ಪಾದಕ ಗ್ರಾಮಗಳು ಅತ್ಯಂತ ಅವಶ್ಯಕ ಎಂದು ತಿಳಿಸಿದರು. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಬೇಕೆಂಬುದೇ ಸರ್ಕಾರಗಳ ಸದಾಶಯ. ಗ್ರಾಮ ಪಂಚಾಯತಿಗಳು ಈ ದೇಶದ ಶಕ್ತಿ. ಗ್ರಾಮ ಪಂಚಾಯಿತಿ ಅಧ್ಯಕರು ಆ ಗ್ರಾಮದ ಮುಖ್ಯಮಂತ್ರಿ ಇದ್ದಹಾಗೆ. ಕೇಂದ್ರದ ಯಾವುದೇ ಒಂದು ಯೋಜನೆ ದೇಶದ ಪ್ರಧಾನಿಗಳು ನಿರ್ಧಾರ ಮಾಡಿದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅದನ್ನು ತಲುಪಿಸುವಂತಹ ಜವಾಬ್ದಾರಿ ಗ್ರಾಮ ಪಂಚಾಯತಿ ಅಧ್ಯಕ್ಷರದ್ದು. ಆದರೆ ದುರ್ದೈವ ಇವತ್ತು ಕರ್ನಾಟಕದಲ್ಲಿ ಗ್ರಾಮ ಪಂಚಾಯತಿಯೂ ಇಲ್ಲ, ತಾಲೂಕು ಪಂಚಾಯತಿಯೂ ಇಲ್ಲ, ಜಿಲ್ಲಾ ಪಂಚಾಯತಿಯೂ ಇಲ್ಲ. ಆದರೆ, ಇವತ್ತು ಗ್ರಾಮ ಪಂಚಾಯತಿಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಸಮಾಜಕ್ಕಾಗಿ ಕೆಲಸವನ್ನು ಮಾಡಬೇಕಾಗಿದೆ. ಸ್ವಚ್ಛ ಭಾರತ ಮಿಷನ್ ಅಡಿ ಗ್ರಾಮಗಳಲ್ಲಿ ಶೌಚಾಲಯಗಳ ನಿರ್ಮಾಣ ಮತ್ತು ಅದರ ನಿರ್ವಹಣೆ, ಕುಡಿಯುವ ನೀರು, ಸಾಮಾಜಿಕ ಅರಣ್ಯೀಕರಣ, ಸಾವಯವ ಕೃಷಿ, ಗ್ರಂಥಾಲಯ, ಮುಖ್ಯವಾಗಿ ಇ-ಲೈಬ್ರರಿ ಈ ಎಲ್ಲ ವಿಚಾರಗಳಲ್ಲಿ ಸಹಿತ ಗ್ರಾಮ ಪಂಚಾಯತಿಗಳು ತಮ್ಮ ಜವಾಬ್ದಾರಿಗಳ ನಿರ್ವಹಣೆ ಮಾಡಬೇಕಾಗಿದೆ.
ಇವತ್ತು ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲ. ಆದಷ್ಟು ಬೇಗ ಗ್ರಾಮ ಪಂಚಾಯತಿಗಳಿಗೆ ಚುನಾವಣೆಗಳನ್ನು ಮಾಡುತ್ತೇವೆಂದು ಮುಖ್ಯಮಂತ್ರಿಗಳು ಹೇಳಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಚುನಾವಣೆಯನ್ನು ಮಾಡಿದ್ದಾದರೆ, ನಿಜವಾಗಿಯೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಈ ಒಂದು ವ್ಯವಸ್ಥೆ ಯಶಸ್ವಿಯಾಗುತ್ತದೆ. ಗ್ರಾಮದಲ್ಲಿರತಕ್ಕಂತಹ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕಾದರೆ ಸ್ವಚ್ಛತೆಗೆ ಮತ್ತು ನೈರ್ಮಲ್ಯೀಕರಣಕ್ಕೆ ಆದ್ಯತೆಯನ್ನು ಕೊಡಬೇಕಾಗಿದೆ.
2014 ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ “ಸ್ವಚ್ಛ ಭಾರತ ಅಭಿಯಾನ” ಪ್ರಾರಂಭ ಮಾಡಿದಾಗ ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡಿದ್ದರು. ಆದರೆ, ಈ ದೇಶದ ಮುಖ್ಯಸ್ಥನಾಗಿ ನಾನು ದೇಶದ ಸ್ವಚ್ಛತೆಯ ಜವಾಬ್ದಾರಿಯನ್ನು ಹೊರದೇ ಇದ್ದರೆ, ಸಮಾಜದ ಕಡೆಯ ವ್ಯಕ್ತಿಯೂ ಸಹಿತ ಮಾಡಲಾರ ಎಂಬ ಹಿನ್ನೆಲೆಯಲ್ಲಿ, ನನ್ನ ದೇಶ ಸ್ವಚ್ಛ ದೇಶ ಎಂಬ ಸಂಕಲ್ಪದೊAದಿಗೆ, ಸ್ವಚ್ಛ ಭಾರತ ಅಭಿಯಾನಕ್ಕೆ ಒತ್ತು ಕೊಟ್ಟರು. ವಿಶೇಷವಾಗಿ ಶೌಚಾಲಯಗಳ ನಿರ್ಮಾಣ. ನಾನು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಮ್ಮ ಸಹೋದರಿಯರು ಹಾಗೂ ತಾಯಂದಿರು ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ಶೌಚಕ್ಕೆ ಹೋಗುವ ಸಂಗತಿ ನನ್ನ ಗಮನಕ್ಕೆ ಬಂದಿವೆ. ಅದು ಅವರ ಸಾಮಾಜಿಕ ಬದ್ಧತೆಗೆ ದಕ್ಕೆ ತರುವ ಸಂಗತಿ. ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ ಸಹಿತ ಈ ತೊಂದರೆಯನ್ನು ನಮ್ಮ ಸಮಾಜ ಅನುಭವಿಸಿದ್ದನ್ನು ನೋಡಿದ್ದೇವೆ.
ಇದನ್ನು ಅರಿತಂತಹ ಭಾರತ ಸರ್ಕಾರ ಶೌಚಾಲಯಗಳ ನಿರ್ಮಾಣಮಾಡುವ ಯೋಜನೆಗೆ ನಾಂದಿ ಹಾಡಿತು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 20,000 ರೂಪಾಯಿಗಳ ವಿಶೇಷ ಅನುದಾನವನ್ನು ನೀಡುವ “ಸ್ವಚ್ಛ ಭಾರತ ಮಿಷನ್” ಜಾರಿಗೆ ತಂದರು. ಇದರಿಂದ ಪ್ರತಿ ಗ್ರಾಮವನ್ನು ಬಹಿರ್ದೆಸೆ ಮುಕ್ತ ಗ್ರಾಮ ಮಾಡಲು ಸಾಧ್ಯವಾಯಿತು. ಸಮರ್ಪಕ ನೀರಿದ್ದರೆ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ. ಹಾಗಾಗಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪಿಡಿಒಗಳು ಮತ್ತು ಪಂಚಾಯಿತಿ ಅಧ್ಯಕ್ಷರು ಮುತುವರ್ಜಿ ವಹಿಸಬೇಕಾಗಿದೆ. ಇದಲ್ಲದೆ ಕಸ ವಿಲೇವಾರಿಯನ್ನು ಪರಿನಾಮಕಾರಿಯಾಗಿಮಾಡಿ ಗ್ರಾಮದ ಸ್ವಚ್ಛತೆ ಆದ್ಯತೆ ನೀಡಿದಾಗ ಮಾತ್ರ ಸುಂದರ ಗ್ರಾಮವನ್ನು ನಿರ್ಮಾಣ ಮಾಡಲು ಸಾಧ್ಯ.
ಹತ್ತು ವರ್ಷಗಳ ಹಿಂದೆ 20 ಜನ ಕೃಷಿಕರ ತಂಡದೊ ಂದಿಗೆ ನಾವು ಇಸ್ರೇಲ್ಗೆ ಹೋಗುವಾಗ ಮಾರ್ಗ ಮಧ್ಯೆ ಜೋರ್ಡಾನ್ನಲ್ಲಿ ವಾಸ್ತವ್ಯ ಮಾಡಿದ ಸಂದರ್ಬದಲ್ಲಿ ಅಲ್ಲಿನ ವಿಲಕ್ಷಣಕಾರಿ ಸಂಗತಿಯೊ ಂದು ನನಗೆ ತಿಳಿದುಬಂದಿದ್ದೇನೆAದರೆ, ಆ ದೇಶದಲ್ಲಿ ನಾಲ್ಕು ವರ್ಷಕ್ಕೊಮ್ಮೆ ಮಳೆ ಆಗುತ್ತದೆ. ಆ ಮಳೆ ನೀರನ್ನೇ ಅವರು ಇಡೀ ನಾಲ್ಕು ವರ್ಷ ಬಳಕೆ ಮಾಡುತ್ತಾರೆ ಮತ್ತು ಬಳಸಿದ ನೀರನ್ನೂ ಮತ್ತೆ ಮರು ಬಳಕೆಗೆ ಯೋಗ್ಯ ನೀರನ್ನಾಗಿ ಪರಿವರ್ತಿಸುತ್ತಾರೆ. ಅವರಿಗೆ ಹೋಲಿಸಿದೆ ನಾವು ಪುಣ್ಯವಂತರು, ಆದರೆ ಬರುವ ದಿನಮಾನಗಳಲ್ಲಿ ಇದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿ ಹನಿ ನೀರನ್ನು ಸದ್ಬಳಕೆ ಮಾಡಬೇಕಾದಂತ ಜವಾಬ್ದಾರಿ ನಮ್ಮ ಮೇಲಿದೆ. ಪ್ರತಿ ಮನೆ ಮನೆಗೂ ಮಳೆ ನೀರು ಕೊಯ್ಲು ಮಾಡಲು ಇಂಗು ಗುಂಡಿಗಳನ್ನು ನಿರ್ಮಿಸುವತ್ತ ಹೆಚ್ಚು ಗಮನ ಕೊಡಬೇಕಾಗಿದೆ. ಆಗ ಮಾತ್ರ ಅಂತರ್ಜಲ ಮಟ್ಟ ಹೆಚ್ಚಾಗಲು ಸಾಧ್ಯ.
ನಮ್ಮ ನಾಗರಿಕ ಸೌಲಭ್ಯಗಳಿಗಾಗಿ ಮತ್ತು ಅನುಕೂಲತೆಗಳಿಗಾಗಿ ಪರಿಸರದ ಮೇಲಿನ ಅತ್ಯಾಚಾರ ಕೊಣೆಯಾಗಬೇಕಾಗಿದೆ. ಇಲ್ಲವಾದರೆ ಅದರ ಪರಿಣಾಮವನ್ನು ನಾವು ಹಾಗೂ ನಮ್ಮ ಮುಂದಿನ ಜನಾಂಗ ಅನುಭವಿಸಬೇಕಾದಂತ ಕಾಲ ದೂರವಿಲ್ಲ. ಪ್ರತಿ ಹಳ್ಳಿ, ಪಟ್ಟಣ, ನಗರ ಪ್ರದೇಶಗಳಲ್ಲಿ ಮರ ಕಡಿಯಲು ಅನುಮತಿ ನೀಡುವ ಮುಂಚೆ ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕಾಗಿದೆ.
ಕೇವಲ ಹಣ ಗಳಿಸುವ ಉದ್ದೇಶದಿಂದ ಬೆಳೆಗಳ ಕೀಟಬಾದೆ ತಡೆಯಲು ಮತ್ತು ಸಮೃದ್ಧ ಫಸಲು ಬರುವ ಉದ್ದೇಶದಿಂದ ಹೇರಳವಾಗಿ ಕೀಟನಾಶಕ ಹಾಗೂ ರಸಾಯನಿಕಗಳನ್ನು ಬಳಸಿ ಜನರ ಸ್ವಾಸ್ಥö್ಯ ಹಾಳುಮಾಡುವುದಲ್ಲದೆ, ಕೃಷಿ ಭೂಮಿಯ ಫಲವತ್ತತೆಯನ್ನೂ ಹಾಳುಮಾಡುವ ಬದಲು ಸಾವಯವ ಕೃಷಿಗೆ ಒತ್ತು ನೀಡುವಮೂಲಕ ಮುಂದಿನ ಜನಾಂಗವನ್ನು ಆರೋಗ್ಯವಂತ ಹಾಗೂ ಸದೃಡ ಜನಾಂಗವನ್ನಾಗಿ ಮಾಡಲು ಸಾಧ್ಯ.
ಆದುದರಿಂದ ನೀರಿನ ಸದ್ಬಳಕೆ, ಸೌರಶಕ್ತಿ ಉತ್ಪಾದನೆ, ನವೀಕರಿಸಬಹುದಾದ ಇಂಧನ, ತ್ಯಾಜ್ಯ ನಿರ್ವಹಣೆ ಈ ಎಲ್ಲಾ ವಿಚಾರಗಳ ಬಗ್ಗೆ ಅರಿವು ಹಾಗೂ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಈ ಒಂದು ವಿಶೇಷವಾದ ವಿಚಾರ ಸಂಕಿರಣ ಎಲ್ಲ ಗ್ರಾಮಗಳನ್ನು ಸುಂದರವಾದ ಅಭೀವೃದ್ದಿಶೀಲ ಗ್ರಾಮಗಳನ್ನಾಗಿ ನಿರ್ಮಾಣ ಮಾಡುವಂತಹ ಸಾಮಾಜಿಕ ಜವಾಬ್ದಾರಿಗೆ ಎಲ್ಲರೂ ಸಹಿತ ಕೊಡುಗೆ ನೀಡುವಂತೆ ಪ್ರೆರೆಪಿಸವಲ್ಲಿ ಯಶಸ್ವಿಯಾಗಲೆಂದು ಹಾರೈಸಿದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಶೇಷಗಿರಿ ಕ್ಯಾಂಪಸ್ನ ಪ್ರಾಚಾರ್ಯರಾದ ಡಾ. ಎಸ್. ಎಫ್. ಪಾಟೀಲ್ ಅವರು ಸಭೆಯನ್ನು ಸ್ವಾಗತಿಸಿ, ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಪ್ರಕೃತಿ ಆಧಾರಿತ ಪರಿಹಾರಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮಹತ್ವವನ್ನು ತಿಳಿಸಿದರು. ಸುಸ್ಥಿರ ಗ್ರಾಮೀಣ ರೂಪಾಂತರಕ್ಕೆ ಶಿಕ್ಷಣ ಸಂಸ್ಥೆಗಳು, ರೈತರು, ಇಂಜಿನಿಯರ್ಗಳು, ಸಮುದಾಯಗಳು ಮತ್ತು ನೀತಿ ನಿರೂಪಕರ ಸಾಮೂಹಿಕ ಪ್ರಯತ್ನ ಅವಶ್ಯಕ ಎಂದು ತಿಳಿಸಿದರು.
ಪ್ರಕೃತಿ ಗ್ರೂಪ್ನ ಅಧ್ಯಕ್ಷರು ಮತ್ತು ಸಿಇಒ ಆದ ಡಾ. ಪುರಂದರ ಬೆಕಲ್ ಅವರು ಸಮ್ಮೇಳನದ ಉದ್ದೇಶಗಳನ್ನು ವಿವರಿಸುತ್ತಾ, ಪರಿಸರ ಜವಾಬ್ದಾರಿ ಹಾಗೂ ಆರ್ಥಿಕ ಸ್ವಾವಲಂಬನೆ ಹೊಂದಿರುವ ಗ್ರಾಮೀಣ ಸಮುದಾಯಗಳ ಮಾದರಿಯಾಗಿ ಪರಿಸರ-ಸ್ಮಾರ್ಟ್ ಹಳ್ಳಿಗಳ (Eco-Smart Villages) ಅಭಿವೃದ್ಧಿಗೆ ಒತ್ತು ನೀಡಿದರು. ಕೃಷಿ ಉತ್ಪಾದಕತೆ, ಸಂಪನ್ಮೂಲ ದಕ್ಷತೆ ಮತ್ತು ಗ್ರಾಮೀಣ ಸ್ಥಿತಿಥಾಪಕತ್ವವನ್ನು ಬಲಪಡಿಸಲು ಸಾಂಪ್ರದಾಯಿಕ ಜ್ಞಾನ, ತಾಂತ್ರಿಕ ನಾವೀನ್ಯತೆ ಮತ್ತು ಡಿಜಿಟಲ್ ಪರಿವರ್ತನೆಯನ್ನು ಒಗ್ಗೂಡಿಸಲು ಇಂಜಿನಿಯರ್ಗಳು ಮತ್ತು ರೈತರು ಪರಸ್ಪರ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ವಿಶಾಖಪಟ್ಟಣದ ಫೆಡರೇಷನ್ ಆಫ್ ಮೈನರ್ ಮಿನರಲ್ ಇಂಡಸ್ಟ್ರೀಸ್ನ (FEMMI) ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಅತಿಥಿಗಳಾದ ಡಾ. ಸಿ. ಹೆಚ್. ರಾವ್ ಅವರು ಮಾತನಾಡಿ, ಹಳ್ಳಿಗಳನ್ನು ಆರ್ಥಿಕ ಬೆಳವಣಿಗೆಯ ಉತ್ಪಾದಕ ಮತ್ತು ಲಾಭದಾಯಕ ಕೇಂದ್ರಗಳನ್ನಾಗಿ ಪರಿವರ್ತಿಸುವ ಕುರಿತು ಮಾತನಾಡಿದರು. ಕೃಷಿ ತ್ಯಾಜ್ಯಗಳು, ಸಾವಯವ ತ್ಯಾಜ್ಯ, ನೀರು ಮತ್ತು ಶಕ್ತಿಯ ಮರುಬಳಕೆಯನ್ನು ಉತ್ತೇಜಿಸುವ ವೃತ್ತಾಕಾರದ ಕೃಷಿ ಪದ್ಧತಿಗಳನ್ನು ಅವರು ಸಮರ್ಥಿಸಿದರು. ಕೃಷಿ ತ್ಯಾಜ್ಯವನ್ನು ಕಾಂಪೋಸ್ಟ್, ಜೈವಿಕ ಗೊಬ್ಬರ ಮತ್ತು ಬಯೋಸಿಆರ್ (ಬಯೋಗ್ಯಾಸ್) ಆಗಿ ಪರಿವರ್ತಿಸುವುದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ, ಒಳಹರಿವಿನ ವೆಚ್ಚ ತಗ್ಗುತ್ತದೆ, ನವೀಕರಿಸಬಹುದಾದ ಶಕ್ತಿ ಉತ್ಪತ್ತಿಯಾಗುತ್ತದೆ ಮತ್ತು ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಪುರಂದರ ಬೆಕಲ್ ಅವರು ರಚಿಸಿ, ಡಾ. ಪ್ರಭಾಕರ ಸಂಗೂರಮಠ ಅವರ ಸಹ-ಲೇಖಕತ್ವದಲ್ಲಿ ಮೂಡಿಬಂದಿರುವ “Sustainable Mine Water Management – Integrated Hydrological Perspective” ಕೃತಿಯ ಬಿಡುಗಡೆಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹಟ್ಟಿ ಗೋಲ್ಡ್ ಮೈನ್ಸ್ನ ಮಾಜಿ ನಿರ್ದೇಶಕರಾದ ಡಾ. ಪ್ರಭಾಕರ ಸಂಗೂರಮಠ ಅವರು ಅಂತರ್ಜಲ ಜಲವಿಜ್ಞಾನ, ವೈಜ್ಞಾನಿಕ ಗಣಿ-ನೀರು ನಿರ್ವಹಣೆ ಮತ್ತು ಪರಿಸರ ಮರುಸ್ಥಾಪನೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ನಾವೀನ್ಯತೆ ಮತ್ತು ಜವಾಬ್ದಾರಿಯುತ ಸಂಪನ್ಮೂಲ ನಿರ್ವಹಣೆಯ ಮೂಲಕ ಸುಸ್ಥಿರ ಗ್ರಾಮೀಣ ಅಭಿವೃದ್ಧಿಯನ್ನು ಮುನ್ನಡೆಸಲು ಅಂತರಶಿಸ್ತೀಯ ಸಹಕಾರದ ಅಗತ್ಯತೆಯನ್ನು ಈ ಕಾರ್ಯಕ್ರಮವು ಒತ್ತಿಹೇಳಿತು.
ಸಮಾರಂಭವನ್ನು ಡಾ. ನಯನಾ ಹೆಚ್. ಮತ್ತು ಕುಮಾರಿ ಶ್ರೇಯಾ ಖೋಟ್ ನಿರೂಪಿಸಿದರು. ಸಿವಿಲ್ ಇಂಜಿನಿಯರಿ ಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಮಂಜುನಾಥ್ ಅವರು ವಂದನಾರ್ಪಣೆಗೈದು, ಗಣ್ಯರು, ತಜ್ಞರು, ಸಂಘಟಕರು ಮತ್ತು ಪ್ರತಿನಿಧಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
