Khanapur

ಖಾನಾಪುರ ತಾಲೂಕಿನ ಚನ್ನೆವಾಡಿಯಲ್ಲಿ ತೀವ್ರ ನೀರಿನ ತತ್ವಾರ

Share

ಕೇವಲ ಮೂನ್ನೂರು ಜನಸಂಖ್ಯೆಯಿರುವ ಖಾನಾಪೂರ ತಾಲೂಕಿನ ಚನ್ನೆವಾಡಿ ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದ ಹೈರಾಣಾಗಿರುವ ಗ್ರಾಮಸ್ಥರು, ಕೊನೆಗೂ ಶಾಸಕರ ಬಳಿ ತಮ್ಮ ಗೋಳು ತೋಡಿಕೊಂಡಿದ್ದಾರೆ. ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಗೆ ಶಾಸಕರು ಎಂಟು ದಿನಗಳಲ್ಲಿ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಕುಡಿಯುವ ನೀರಿನ ಸಂಕಷ್ಟ ಎಷ್ಟು ಬೇಗ ನೀಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಖಾನಾಪುರ ತಾಲ್ಲೂಕಿನ ಕಸಬಾ ನಂದಗಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನ್ನೆವಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಶಾಸಕರ ಮೊರೆ ಹೋಗಿದ್ದಾರೆ. ಕೇವಲ ಮೂರು ನೂರು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಬೋರ್‌ವೆಲ್ ಹಾಗೂ ಹಳೆಯ ಬಾವಿಯ ಮೋಟಾರುಗಳು ಕೆಟ್ಟು ನಿಂತಿದ್ದರಿಂದ ಜನರು ಹನಿ ನೀರಿಗೂ ಪರದಾಡುವಂತಾಗಿದೆ. ಈ ಕುರಿತು ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಶನಿವಾರದಂದು ಗ್ರಾಮಸ್ಥರು ಸಭೆ ನಡೆಸಿ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿರುವ ಶಾಸಕರು, ಮುಂದಿನ ಎಂಟು ದಿನಗಳಲ್ಲಿ ಹೊಸ ಬೋರ್‌ವೆಲ್ ಕೊರೆಸಿಕೊಡುವುದಾಗಿ ಹಾಗೂ ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಾಗಿ ಭರವಸೆ ನೀಡಿದ್ದಾರೆ.

Tags:

error: Content is protected !!