BELAGAVI

ಸಹಸ್ರಾರು ದೀಪಗಳ ಬೆಳಕು… ನಂದಿಧ್ವಜಗಳ ಮೆರಗು… ತಾಯಿ ತುಳಜಾಭವಾನಿಯ ಭವ್ಯ ಛಬಿನಾ! IN NEWS ತಂಡದಿಂದ 12 ದಿನಗಳಲ್ಲಿ 20 ಸುದ್ದಿಗಳ ಪ್ರಸಾರ; ಭಕ್ತಿ ಪಯಣ ಜೊತೆಗೆ ಸೇವೆಯಿಂದ ಸುದ್ದಿ

Share

ತುಳಜಾಪುರ:  ಮಹಾರಾಷ್ಟ್ರದ ಸುಕ್ಷೇತ್ರ ತುಳಜಾಪುರದಲ್ಲಿ ನಡೆದ ಶಾರದೀಯ ನವರಾತ್ರಿ ಉತ್ಸವ ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯದ ಸಂಗಮಕ್ಕೆ ಸಾಕ್ಷಿಯಾಯಿತು. ತಾಯಿ ತುಳಜಾಭವಾನಿಯ ದರ್ಶನ, ವಿವಿಧ ಧಾರ್ಮಿಕ ವಿಧಿವಿಧಾನಗಳು, ಪಾದಯಾತ್ರೆ ಹಾಗೂ ಕೊಜಾಗಿರಿ ಹುಣ್ಣಿಮೆಯ ಭವ್ಯ ಛಬೀನಾ ಭಕ್ತರ ಗಮನ ಸೆಳೆದವು. ಈ ಎಲ್ಲ ವಿಶೇಷ ಕ್ಷಣಗಳನ್ನು ಇನ್ ನ್ಯೂಜ್ ವಾಹಿನಿ ತನ್ನ ವೀಕ್ಷಕರಿಗೆ ತಲುಪಿಸಿದೆ. ಇನ್ ನ್ಯೂಜ್ ವಿಜಯಪುರ ಜಿಲ್ಲಾ ವರದಿಗಾರ ವಿಜಯಕುಮಾರ್ ಸಾರವಾಡ ಅವರ ನೇತೃತ್ವದಲ್ಲಿ ಹನ್ನೆರಡು ದಿನಗಳಲ್ಲಿ 20ಕ್ಕೂ ಹೆಚ್ಚು ವರದಿಗಳು ಪ್ರಸಾರವಾಗಿವೆ. ಇಂದಿನ ಕೊನೆಯ ವರದಿಯಲ್ಲಿ ಮತ್ತಷ್ಟು ಮಾಹಿತಿ‌ ಇವೆ. ನೋಡೋಣ ಬನ್ನಿ..

 

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಅಪಾರ ಭಕ್ತರ ತಾಯಿ ತುಳಜಾಭವಾನಿಯ ಆರಾಧನೆಯ ಕೇಂದ್ರವಾಗಿರುವ ಸುಕ್ಷೇತ್ರ ತುಳಜಾಪುರದಲ್ಲಿ ಶಾರದೀಯ ನವರಾತ್ರಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನವರಾತ್ರಿಯ ಹನ್ನೆರಡು ದಿನಗಳ ಕಾಲ ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು, ಅಭಿಷೇಕಗಳು ಹಾಗೂ ಸಂಪ್ರದಾಯಬದ್ಧ ಆಚರಣೆಗಳು ಉತ್ಸವದ ವೈಭವವನ್ನು ಹೆಚ್ಚಿಸಿದವು. ತಾಯಿಯ ದರ್ಶನಕ್ಕಾಗಿ ಆಗಮಿಸಿದ ಭಕ್ತರ ಸಂಭ್ರಮ, ಧಾರ್ಮಿಕ ಕಾರ್ಯಕ್ರಮಗಳ ಮಹತ್ವ ಹಾಗೂ ತುಳಜಾಪುರದ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇನ್ ನ್ಯೂಜ್ ತಂಡ ವಿಶೇಷ ಪ್ರಯತ್ನ ಮಾಡಿದೆ. ಇನ್ ನ್ಯೂಜ್ ವಿಜಯಪುರ ಜಿಲ್ಲಾ ವರದಿಗಾರ ವಿಜಯಕುಮಾರ್ ಸಾರವಾಡ ಅವರ ನೇತೃತ್ವದಲ್ಲಿ ಹನ್ನೆರಡು ದಿನಗಳಲ್ಲಿ 20ಕ್ಕೂ ಹೆಚ್ಚು ವರದಿಗಳನ್ನು ಸಿದ್ಧಪಡಿಸಿ ಪ್ರಸಾರ ಮಾಡಲಾಗಿದೆ. ಪಾದಯಾತ್ರೆಯಿಂದ ಹಿಡಿದು ವಿವಿಧ ಧಾರ್ಮಿಕ ಕಾರ್ಯಕ್ರಮಗಳವರೆಗೆ, ತುಳಜಾಪುರದಲ್ಲಿ ನಡೆದ ವಿಶೇಷ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಅಲ್ಲಿನ ಭಕ್ತಿಯ ವಾತಾವರಣವನ್ನು ವೀಕ್ಷಕರ ಮನೆಗಳಿಗೆ ತಲುಪಿಸಲಾಗಿದೆ. ದೂರದ ತುಳಜಾಪುರದಲ್ಲಿ ನಡೆಯುತ್ತಿದ್ದ ಉತ್ಸವದ ಕ್ಷಣಗಳನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸುವ ಅವಕಾಶವನ್ನು ಇನ್ ನ್ಯೂಜ್ ತನ್ನ ವೀಕ್ಷಕರಿಗೆ ಕಲ್ಪಿಸಿದೆ.

 

ಇನ್ನೂ ಕೊಜಾಗಿರಿ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಸುಕ್ಷೇತ್ರ ತುಳಜಾಪುರದಲ್ಲಿ ನಡೆದ ತಾಯಿ ತುಳಜಾಭವಾನಿಯ ಭವ್ಯ ಛಬೀನಾ ಉತ್ಸವ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು. ಸಾವಿರಾರು ದೀಪಗಳ ಬೆಳಕು, ಭಕ್ತರ ಜಯಘೋಷ, ಸೊಲ್ಲಾಪುರದ ಮಾನದ ನಂದಿಧ್ವಜಗಳು ಹಾಗೂ ತಾಯಿಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತಸಾಗರ ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಮೈಲಿಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿಬಂದ ಭಕ್ತರ ಬಾಯಲ್ಲಿ ‘ಐ ರಾಜಾ ಉದೋ ಉದೋ’ ಎಂಬ ಜಯಘೋಷ ಮೊಳಗುತ್ತಿತ್ತು. ದಣಿವನ್ನೂ ಲೆಕ್ಕಿಸದೆ ತಾಯಿಯ ದರ್ಶನಕ್ಕಾಗಿ ಸಾಗಿದ ಭಕ್ತರ ನಂಬಿಕೆ ಮತ್ತು ಶ್ರದ್ಧೆ ಎಲ್ಲರ ಗಮನ ಸೆಳೆಯಿತು. ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಭೇದಗಳನ್ನು ಮರೆತು ತಾಯಿಯ ಸನ್ನಿಧಿಯಲ್ಲಿ ಒಂದಾದ ಭಕ್ತರ ದೃಶ್ಯಗಳು ನವರಾತ್ರಿ ಉತ್ಸವದ ಮಹತ್ವವನ್ನು ಸಾರಿದವು. ಈ ಭವ್ಯ ಛಬೀನಾ ಹಾಗೂ ಪಾದಯಾತ್ರೆಯ ಪ್ರತಿಯೊಂದು ವಿಶೇಷ ಕ್ಷಣವನ್ನು ವೀಕ್ಷಕರಿಗೆ ತಲುಪಿಸುವ ಉದ್ದೇಶದಿಂದ ವಿಜಯಕುಮಾರ್ ಸಾರವಾಡ ಅವರ ನೇತೃತ್ವದ ಇನ್ ನ್ಯೂಜ್ ತಂಡ ಸ್ಥಳದಲ್ಲೇ ವರದಿಗಾರಿಕೆ ನಡೆಸಿದೆ. ತಮ್ಮ ಕುಟುಂಬದೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ವಿಜಯಕುಮಾರ್ ಸಾರವಾಡ ಅವರು, ಇನ್ ನ್ಯೂಜ್ ತಂಡವನ್ನೂ ಜೊತೆಯಲ್ಲಿ ಕರೆದೊಯ್ದು, ಧಾರ್ಮಿಕ ವಿಧಿವಿಧಾನಗಳು ಮತ್ತು ಉತ್ಸವದ ದೃಶ್ಯಗಳನ್ನು ಪಿನ್ ಟು ಪಿನ್ ವರದಿ ಮಾಡುವಲ್ಲಿ ಶ್ರಮಿಸಿದ್ದಾರೆ. ಹೀಗೆ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಇನ್ ನ್ಯೂಜ್ ತಂಡ ತನ್ನ ವೀಕ್ಷಕರಿಗೆ ತುಳಜಾಪುರದ ಉತ್ಸವದ ಅಪೂರ್ವ ಅನುಭವವನ್ನು ತಲುಪಿಸಿದೆ.

 

ಒಟ್ಟಾರೆ, ಇತರೆ ಸುದ್ದಿಯ ಜೊತೆಗೆ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಜನರಿಗೆ ಪರಿಚಯಿಸುವ ಪ್ರಯತ್ನವೇ ಇನ್ ನ್ಯೂಜ್‌ನ ಸುದ್ದಿಸೇವೆಯ ಪಯಣ. ಸುಕ್ಷೇತ್ರ ತುಳಜಾಪುರದ ಶಾರದೀಯ ನವರಾತ್ರಿ ಉತ್ಸವದಿಂದ ಕೊಜಾಗಿರಿ ಹುಣ್ಣಿಮೆಯ ಭವ್ಯ ಛಬೀನಾ ಉತ್ಸವದವರೆಗೆ ಹನ್ನೆರಡು ದಿನಗಳಲ್ಲಿ 20ಕ್ಕೂ ಹೆಚ್ಚು ವರದಿಗಳನ್ನು ನಿಮ್ಮ ಮುಂದಿಡಲಾಗಿದೆ. ವಿಜಯಕುಮಾರ್ ಸಾರವಾಡ ಅವರ ನೇತೃತ್ವದಲ್ಲಿ ಈ ವಿಶೇಷ ವರದಿಗಳನ್ನು ರೂಪಿಸಲು ಸಹಕರಿಸಿದ ತಂಡದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಇನ್ ನ್ಯೂಜ್‌ನ ದಶಕದ ಸೇವೆಯ ಪಯಣದಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಿದ ಎಲ್ಲ ವೀಕ್ಷಕರ ಪ್ರೀತಿ, ವಿಶ್ವಾಸ ಮತ್ತು ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು. ಮುಂದೆಯೂ ಇದೇ ಪ್ರೀತಿ, ಪ್ರೋತ್ಸಾಹ ಮತ್ತು ವಿಶ್ವಾಸ ನಮ್ಮ ಮೇಲಿರಲಿ ಎಂದು ಆಶಿಸುತ್ತೇವೆ.
ತಾಯಿ ತುಳಜಾಭವಾನಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ. ಜೈ ತಾಯಿ ತುಳಜಾಭವಾನಿ! ಜೈ ಭವಾನಿ!

Tags:

error: Content is protected !!