Dharwad

ಧಾರವಾಡದ ಗಾಮನಗಟ್ಟಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ

Share

ಆದಿ ಕವಿ, ರಾಮಾಯಣದ ಪಿತಾಮಹ ಹಾಗೂ ವಾಲ್ಮೀಕಿ ಸಮಾಜ ಸೇರಿದಂತೆ ಸಮಸ್ತ ಹಿಂದೂಗಳ ಆರಾಧ್ಯ ದೈವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು, ಧಾರವಾಡ ತಾಲೂಕಿನ (ಹುಬ್ಬಳ್ಳಿ-ಧಾರವಾಡ) ಗಾಮನಗಟ್ಟಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಅತ್ಯಂತ ಅರ್ಥಪೂರ್ಣವಾಗಿ ಜಯಂತೋತ್ಸವವನ್ನು ನೆರವೇರಿಸಿದರು.

ಧಾರವಾಡ ಜಿಲ್ಲೆಯ ಗಾಮನಗಟ್ಟಿ ಗ್ರಾಮದ ವಾಲ್ಮೀಕಿ ಸಮಾಜದ ಯುವಕರು ಹಾಗೂ ಹಿರಿಯರು ಒಟ್ಟುಗೂಡಿ, ಮಹರ್ಷಿ ವಾಲ್ಮೀಕಿಯವರ ಮೂರ್ತಿಗೆ ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿತ್ತು.

ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಮೂರ್ತಿಯ ವೈಭವದ ಮೆರವಣಿಗೆ ನಡೆಯಿತು. ಮೆರವಣಿಗೆಯ ಮುಂಭಾಗದಲ್ಲಿ ಡೊಳ್ಳು ಕುಣಿತ, ಮಕ್ಕಳ ಕೋಲಾಟ, ಝಾಂಜ್ ಮೇಳ ಹಾಗೂ ಮಹಿಳೆಯರ ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರಗು ನೀಡಿದವು. ಇದರೊಂದಿಗೆ ಯುವತಿಯರು ಕುಂಭ-ಆರತಿ ಹಿಡಿದು ಸಾಗಿದ್ದು ಎಲ್ಲರ ಗಮನ ಸೆಳೆಯಿತು.

Tags:

error: Content is protected !!