ನಾಲ್ಕು ಜಿಲ್ಲೆ ನಾಲ್ಕು ಪರಿಷತ್ ವ್ಯಾಪ್ತಿ ಹೊಂದಿರುವ ಪಶ್ಚಿಮ ಪದವೀಧರ ಮತಕ್ಷೇತ್ರ್ಕೆ ಕಳೆದ ಅಕ್ಟೋಬರ್ 23ರಂದು ಮತದಾನ ನಡೆದಿದ್ದು, ಇಂದು ಧಾರವಾಡದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಮತ ಏಣಿಕೆ ನಡೆಯಲಿದೆ. 14ಅಭ್ಯರ್ಥಿಗಳ ಭವಿಷ್ಯ ಪ್ರಕಟನೆ ಕಾರ್ಯ ಈಗ ಆರಂಭವಾಗಿದೆ.
ಹೌದು ಧಾರವಾಡ,ಹಾವೇರಿ,ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದ ಪಶ್ಚಿಮ ಪದವೀಧರ ಮತಕ್ಷೇತ್ರದ ಭವಿಷ್ಯವು ಇಂದು ಪ್ರಕಟವಾಗಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಈಗ ಡವ್ ಡವ್ ಶುರುವಾಗಿದೆ. ಧಾರವಾಡ ಕೃಷಿ ವಿವಿಯ ಆವರಣದಲ್ಲಿ ಮತ ಏಣಿಕೆ ಕಾರ್ಯ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ ಬಂದೋಬಸ್ತ ಕೈಗೊಂಡಿದೆ. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಒಟ್ಟು 97,400 ಮತದಾರರಿದ್ದು, ಅದರಲ್ಲಿ ಒಟ್ಟು 73,692 ಮತಗಳು ಚಲಾವಣೆಯಾಗಿವೆ. ಶೇ.75.66 ರಷ್ಟು ಮತದಾನವಾಗಿದ್ದು, ಎಣಿಕೆ ಕೇಂದ್ರಕ್ಕೆ ಮೂರು ಹಂತಗಳಲ್ಲಿ ಒಟ್ಟು 212 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. 14 ಟೇಬಲ್ಗಳಲ್ಲಿ ಮತ ಎಣಿಕೆ ಆಗಲಿದೆ. ಬಿಜೆಪಿ ಇಂದ ಎಸ್ ವಿ ಸಂಕನೂರು ಅಭ್ಯರ್ಥಿಯಾದರೆ, ಕಾಂಗ್ರೆಸ್ ನಿಂದ ಮೋಹನ್ ಲಿಂಬಿಕಾಯಿ, ವಿದ್ಯಾರ್ಥಿ ಪರ ಹೋರಾಟಗಾರ ಅಕ್ಸಾ ಸಂಘಟನೆ ಮುಖಂಡ ಕಾಂತಕುಮಾರ ಸೇರಿ 14 ಜನರ ಭವಿಷ್ಯ ಇಂದು ಹೊರ ಬೀಳಲಿದೆ.
ಸಹ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಹಾಗೂ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಅವರ ಮುಂದಾಳತ್ವದಲ್ಲಿ ಸ್ಟ್ರಾಂಗ್ ರೂಮ್ಗಳನ್ನು ತೆರೆಯಲಾಗಿದೆ. ಮತದಾನವಾದ ನಂತರ ಮತ ಪೆಟ್ಟಿಗೆಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ತಂದು ಸ್ಟ್ರಾಂಗ್ ರೂಮ್ನಲ್ಲಿಟ್ಟು ಭದ್ರಪಡಿಸಲಾಗಿತ್ತು. ಮಂಗಳವಾರ ಎಲ್ಲರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ಗಳನ್ನು ತೆರೆಯಲಾಗಿದ್ದು, ಮತ ಎಣಿಕೆ ಆರಂಭವಾಗಿದೆ. ಒಟ್ಟು 73,692 ಮತಗಳು ಚಲಾವಣೆಯಾಗಿದ್ದು, 14 ಟೇಬಲ್ಗಳ ಮುಖಾಂತರ ಮತ ಎಣಿಕೆ ನಡೆಸಲಾಗುತ್ತಿದೆ.
