ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದ ಮೊಟ್ಟ ಮೊದಲ ಧೀರ ಮಹಿಳೆ ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮಳ 202ನೇ ವಿಜಯೋತ್ಸವದ ಅಂಗವಾಗಿ ಆಚರಿಸುವ ಕಿತ್ತೂರು ಉತ್ಸವದ ಅಂಗವಾಗಿ ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಅ.23ರಂದು ಬ್ರಿಟಿಷ್ ರ ವಿರುದ್ಧ ಮೊಟ್ಟ ಮೊದಲು ಬಂಡಾಯ ಎದ್ದಿದ್ದ ಕಿತ್ತೂರು ರಾಣಿ ಚನ್ನಮ್ಮ ಸ್ವಾತಂತ್ರ್ಯದ ಕಹಳೆ ಮೊಳಗಿಸಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದಳು. ಆದರೆ ದುರಂತ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದು ದೇಶದ ಇತಿಹಾಸ ಓದುತ್ತದೆ. ಆದರೆ 1857ರಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೋರಾಟ ನಡೆಸಿದರೆ, ಅದಕ್ಕೂ 1824ರಲ್ಲಿ ತನ್ನ ಕಿತ್ತೂರಿನ ಸಂಸ್ಥಾನವನ್ನು ಉಳಿಸಿಕೊಳ್ಳು ರಾಣಿ ಚನ್ನಮ್ಮ ಹೋರಾಟ ಮಾಡಿದ್ದು ಇತಿಹಾಸವಾಗಿದೆ ಎಂದರು.
ಕನ್ನಡಪರ ಸಂಘಟನೆಗಳು ಆಚರಿಸುತ್ತೇವೆ. ರಾಣಿ ಚನ್ನಮ್ಮ ಸಾಹಸ, ಯಶೋಗಾಥೆ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
