Belagavi

ಬೆಳಗಾವಿಯಲ್ಲಿ ಅ. 24, 25 ರಂದು ಬೃಹತ್ ರಾಷ್ಟ್ರೀಯ FIDE ರೇಟೆಡ್ ಚೆಸ್ ಪಂದ್ಯಾವಳಿ

Share

ಬೆಳಗಾವಿಯಲ್ಲಿ ಉತ್ತರ ಕರ್ನಾಟಕದಲ್ಲೇ ಅತಿ ದೊಡ್ಡದಾದ ರಾಷ್ಟ್ರೀಯ ಮಟ್ಟದ FIDE Rated ಚೆಸ್ ಟೂರ್ನಮೆಂಟ್ ಅಕ್ಟೋಬರ್ 24 ಮತ್ತು 25 ರಂದು ನಡೆಯಲಿದೆ. ಲಯನ್ಸ್ ಕ್ಲಬ್ ಆಫ್ ಬೆಳಗಾಂ ಹಾಗೂ ಬೆಳಗಾಮ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಜಂಟಿಯಾಗಿ ಈ ಬೃಹತ್ ಸ್ಪರ್ಧೆಯನ್ನು ಆಯೋಜಿಸಿವೆ ಎಂದು ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ರಾಮಚಂದ್ರ ಭೀರಡೆ ತಿಳಿಸಿದ್ದಾರೆ.

ನಗರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಕೆಪಿಟಿಸಿಎಲ್ ಹಾಲ್‌ನಲ್ಲಿ ಆಯೋಜಿಸಲಾಗಿರುವ ಈ ಚೆಸ್ ಪಂದ್ಯಾವಳಿಯಲ್ಲಿ ರ್ಯಾಪಿಡ್, ಬ್ಲಿಟ್ಸ್ ಹಾಗೂ ಪಜಲ್ ಟೂರ್ನಮೆಂಟ್‌ಗಳು ನಡೆಯಲಿದ್ದು, ವಿಜೇತರಿಗೆ ಒಟ್ಟು ₹7.25 ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡಲಾಗುವುದು. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಈಗಾಗಲೇ 2 ಗ್ರ್ಯಾಂಡ್ ಮಾಸ್ಟರ್‌ಗಳು, 19 ಇಂಟರ್‌ನ್ಯಾಷನಲ್ ಮಾಸ್ಟರ್‌ಗಳು ಸೇರಿದಂತೆ ಹೊರರಾಜ್ಯಗಳಿಂದ ನೂರಾರು ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಚೆಸ್ ಕ್ರೀಡೆಯನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವುದು ಈ ಬೃಹತ್ ಟೂರ್ನಮೆಂಟ್‌ನ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!