ಮುಖ್ಯಮಂತ್ರಿಗಳ ವಿಶೇಷ ನಗರೋತ್ಥಾನ ಯೋಜನೆಯಡಿ ಉಗಾರ ಪುರಸಭೆ ವತಿಯಿಂದ ಆರು ಜನ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಹಾಗೂ ಪರಿಶಿಷ್ಟ ಜಾತಿಯ ಬಿ.ಇ. ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಜು ಕಾಗೆ ಸಲಹೆ ನೀಡಿದರು.

ಸೋಮವಾರ ಶಾಸಕರಾದ ರಾಜು ಕಾಗೆ ಅವರ ಕಚೇರಿಯಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ತ್ರಿಚಕ್ರ ವಾಹನ ಪಡೆದ ಫಲಾನುಭವಿಗಳಾದ ರಿಯಾಜ್ ಜಮಾದಾರ್, ಅಲಿಯ ನಿಸಾರ್ ಶೇಖ್, ಮಹದೇವ್ ಲಾಂಬಕಾನೆ, ಶೇಖರ್ ಗುರವ, ಮಧುಚಂದ್ರನಾಥ್ ಘಟಕಾಂಬಳೆ ಹಾಗೂ ಕಮಲ್ ಜಾಯಗೊಂಡೆ ಅವರಿಗೆ ವಾಹನಗಳನ್ನು ವಿತರಿಸಲಾಯಿತು. ಲ್ಯಾಪ್ಟಾಪ್ ಪಡೆದ ಫಲಾನುಭವಿಗಳಾದ ಪ್ರೇಮ್ ಶ್ರೀಕಾಂತ್ ಮಾಂಗ್, ಶೃತಿ ಶ್ರೀಕಾಂತ್ ಮಾಂಗ್ ಹಾಗೂ ಪ್ರತಿಕ್ಷ ಸಂಜಯ್ ಅಸೂದೆ ಅವರಿಗೆ ಶಾಸಕರು ಲ್ಯಾಪ್ಟಾಪ್ಗಳನ್ನು ವಿತರಿಸಿದರು.
ಯೋಜನೆಯ ಕುರಿತು ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ್ ಕೌಲಾಪುರೆ ಹಾಗೂ ಮುಖ್ಯ ಅಭಿಯಂತರ ಗಂಗಾಧರ್ ಹಿರೇಮಠ ಅವರು ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷ ಸತೀಶ್ ಜಗತಾಪ್, ಸದಸ್ಯರಾದ ವಿಜಯ ಆಸುಧೆ, ಅಮರ್ ಜಗತಾಪ್, ವೀರಭದ್ರ ಕಟಗೇರಿ, ಭರಮು ಮಾಂಗ್, ಹರುಣ ಮುಲ್ಲಾ, ಪ್ರಫುಲ್ ಥೊರುಷೆ, ಪ್ರಕಾಶ್ ಥೊರುಷೆ, ಪ್ರತಾಪ್ ಜಾತ್ರಾಟೆ, ರಾಜು ಗುರವ, ಅನಿಲ್ ಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ
