ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿಪೀಠ ತುಳಜಾಪುರದ ಶ್ರೀ ತಾಯಿ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ ಏಳನೇ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದ್ದು, ದರ್ಶನ ಮಂಟಪದಲ್ಲಿನ ಸೌಲಭ್ಯಗಳ ಕುರಿತು ಭಕ್ತರು ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಭಕ್ತರ ಮುಖದಲ್ಲಿನ ಸಂತೋಷವೇ ತಾಯಿಯ ನಿಜವಾದ ಆಶೀರ್ವಾದ ಎಂದು ದೇವಸ್ಥಾನದ ಸೇವೆಯಲ್ಲಿ ತೊಡಗಿರುವವರು ಭಾವಿಸುತ್ತಿದ್ದಾರೆ. ಹೇಗಿದೆ ತುಳಜಾಪುರದ ನವರಾತ್ರಿ ಸಂಭ್ರಮ? ಇಲ್ಲಿದೆ ಒಂದು ವಿಶೇಷ ಧಾರ್ಮಿಕ ವರದಿ.

ಹೌದು, ಶಕ್ತಿಯ ಆರಾಧನೆಗೆ ಸಾಕ್ಷಿಯಾಗಿರುವ ತುಳಜಾಪುರದ ಶ್ರೀ ತಾಯಿ ತುಳಜಾಭವಾನಿ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ದಂಡು, ತಾಯಿಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿರುವ ಭಕ್ತರು… ಎಲ್ಲೆಡೆ ಭಕ್ತಿ ಮತ್ತು ಶ್ರದ್ಧೆಯ ಸಮ್ಮಿಲನ ಕಂಡುಬರುತ್ತಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಭಕ್ತರು, ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಭಕ್ತರಿಗೆ ದರ್ಶನ ಸುಗಮ ವಾಗುವಂತೆ ಮಂಟಪದಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಭಕ್ತರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಭಕ್ತರ ಸಂತೋಷದ ಮುಖಗಳು ಹಾಗೂ ತೃಪ್ತಿಯ ಮಾತುಗಳು ದೇವಸ್ಥಾನದ ಸೇವೆಯಲ್ಲಿ ತೊಡಗಿರುವವರಿಗೆ ಹೊಸ ಉತ್ಸಾಹ ತುಂಬುತ್ತಿವೆ.
ಇನ್ನು ತಾಯಿಯ ಸನ್ನಿಧಿಗೆ ಬರುವ ಪ್ರತಿಯೊಬ್ಬ ಭಕ್ತನಿಗೂ ನೆಮ್ಮದಿಯ ದರ್ಶನ ದೊರೆಯಬೇಕು. ದರ್ಶನಕ್ಕಾಗಿ ಆಗಮಿಸುವ ಭಕ್ತರ ಪಯಣ ಸುಗಮವಾಗಿರಬೇಕು, ಅವರು ಸಂತೋಷದಿಂದ ಮನೆಗೆ ಮರಳಬೇಕು ಎಂಬುದೇ ಸೇವೆಯಲ್ಲಿ ತೊಡಗಿರುವವರ ಆಶಯವಾಗಿದೆ. ಭಕ್ತರ ಮುಖದಲ್ಲಿನ ತೃಪ್ತಿ ಮತ್ತು ಅವರ ಹೃದಯದಿಂದ ಹೊರಹೊಮ್ಮುವ ಆಶೀರ್ವಾದಗಳೇ ಇನ್ನಷ್ಟು ಉತ್ತಮ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ತಾಯಿ ತುಳಜಾಭವಾನಿಯ ಸೇವೆ ಮಾಡುವ ಅವಕಾಶವೇ ಒಂದು ಸೌಭಾಗ್ಯ ಎಂಬ ಭಾವನೆ ಭಕ್ತರಲ್ಲಿಯೂ ಸೇವಾಕರ್ತರಲ್ಲಿಯೂ ಭಕ್ತಿಯ ಕಂಪನ ಮೂಡಿಸುತ್ತಿದೆ. ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ತಾಯಿಯ ದರ್ಶನ ಪಡೆದು ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರು ತಾಯಿಯ ಚರಣಗಳಿಗೆ ಶರಣಾಗುತ್ತಿದ್ದಾರೆ.
ಭಕ್ತರ ಮುಖದಲ್ಲಿನ ಸಂತೃಪ್ತಿ, ಹೃದಯದಲ್ಲಿನ ಭಕ್ತಿ ಮತ್ತು ಮನಸ್ಸಿನಲ್ಲಿನ ನೆಮ್ಮದಿ… ಇವೆಲ್ಲವೂ ತಾಯಿ ತುಳಜಾಭವಾನಿಯ ಕೃಪೆಯ ಸಂಕೇತವೆಂಬುದು ಭಕ್ತರ ನಂಬಿಕೆ. ತಾಯಿಯ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಸುಗಮ ದರ್ಶನ ದೊರೆತು, ತಾಯಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿರುತ್ತದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
