ಮಹಾರಾಷ್ಟ್ರ ರಾಜ್ಯದ ತಾಯಿ ತುಳಜಾಭವಾನಿಯ ಸನ್ನಿಧಿಯಲ್ಲಿ ಭಕ್ತಿಯ ವೈಭವ ಅನಾವರಣಗೊಳ್ಳುತ್ತಿದೆ. ಪ್ರಕ್ಷಾಳ ಪೂಜೆಯ ಅಂಗವಾಗಿ ಸ್ಥಳೀಯ ಭಕ್ತರು ಹಾಗೂ ಅರ್ಚಕರು ತಾಯಿಯ ಸೇವೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿರುವ ಭಕ್ತರು, ತಾಯಿಯ ಪಾದಸೇವೆಯಲ್ಲಿ ಧನ್ಯತಾಭಾವವನ್ನು ಅನುಭವಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹೌದು… ತಾಯಿ ತುಳಜಾಭವಾನಿಯ ಸನ್ನಿಧಿಯಲ್ಲಿ ಭಕ್ತಿಯ ವೈಭವ ಅನಾವರಣಗೊಳ್ಳುತ್ತಿದೆ. ಪ್ರಕ್ಷಾಳ ಪೂಜೆಯ ಅಂಗವಾಗಿ ಸ್ಥಳೀಯ ಭಕ್ತರು ಹಾಗೂ ಅರ್ಚಕರು ತಾಯಿಯ ಸೇವೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿರುವ ಭಕ್ತರು, ತಾಯಿಯ ಪಾದಸೇವೆಯಲ್ಲಿ ಧನ್ಯತಾಭಾವವನ್ನು ಅನುಭವಿಸುತ್ತಿದ್ದಾರೆ.
ತಾಯಿಯ ನಾಮಸ್ಮರಣೆ… ಭಕ್ತರ ಮನದಲ್ಲಿ ಅಪಾರ ಶ್ರದ್ಧೆ… ದೇವಸ್ಥಾನದಲ್ಲಿ ಮೊಳಗುತ್ತಿರುವ ಜೈಕಾರದ ಘೋಷ… ಪ್ರಕ್ಷಾಳ ಪೂಜೆಯ ಪ್ರತಿಯೊಂದು ಕ್ಷಣವೂ ಭಕ್ತರಿಗೆ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತಿದೆ. ತಾಯಿಯ ಆರಾಧನೆಯಲ್ಲಿ ಮಿಂದೆದ್ದಿರುವ ಭಕ್ತರು ಮನಸ್ಸಿನ ನೆಮ್ಮದಿ ಹಾಗೂ ಸಂತೃಪ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ. ಭಕ್ತಿ, ಸಂಪ್ರದಾಯ ಮತ್ತು ಸೇವೆಯ ಸಂಗಮಕ್ಕೆ ತುಳಜಾಪುರದ ದೇವಸ್ಥಾನ ಸಾಕ್ಷಿಯಾಗುತ್ತಿದೆ.
ಒಟ್ಟಿನಲ್ಲಿ, ತಾಯಿ ತುಳಜಾಭವಾನಿಯ ಪ್ರಕ್ಷಾಳ ಪೂಜೆ ಭಕ್ತಿಭಾವದಿಂದ ನೆರವೇರುತ್ತಿದ್ದು, ತಾಯಿಯ ಪಾದಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತರು ಪುನೀತ ಭಾವವನ್ನು ಅನುಭವಿಸುತ್ತಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
