Belagavi

ಬೆಳಗಾವಿ ಡಿಸ್ಟಿಕ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ ಗೆದ್ದ ಕಿಶನಕುಮಾರ ತೆಗ್ಗಿನಕೇರಿ ಮತ್ತು ದಿಶಾ ಕಾಮತ್

Share

ಬಿಡಿಎಸ್‌ಕೆಎ ವತಿಯಿಂದ 6ನೇ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಸೆಪ್ಟೆಂಬರ್ 21ರಂದು ಬೆಳಗಾವಿ ಶಹಾಪುರದ ದಾನಮ್ಮ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು.

ಪುರುಷರ ಮುಕ್ತ ತೂಕ ವಿಭಾಗದಲ್ಲಿ ಶ್ರೀ ಕಿಶನಕುಮಾರ ತೆಗ್ಗಿನಕೇರಿ ಅವರು 2026ರ ಬೆಳಗಾವಿ ಡಿಸ್ಟಿಕ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದರೆ, ಮಹಿಳೆಯರ ಮುಕ್ತ ತೂಕ ವಿಭಾಗದಲ್ಲಿ ಕುಮಾರಿ ದಿಶಾ ಕಾಮತ್ ಅವರು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಬ್ಬರೂ ವಿಜೇತರಿಗೆ ತಲಾ ₹8,000 ನಗದು ಬಹುಮಾನ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪದ ಅಧ್ಯಕ್ಷರಾದ ಶ್ರೀ ಸಿ. ಎಸ್. ಬೆಂಬಲಗಿ ಅವರು ಇಬ್ಬರೂ ಕರಾಟೆ ಪಟುಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಡಿಎಸ್‌ಕೆಎ ಅಧ್ಯಕ್ಷ ಗಜೇಂದ್ರ ಕಾಕತಿಕರ, ಕಾರ್ಯದರ್ಶಿ ಜೀತೇಂದ್ರ ಕಾಕತಿಕರ, ಉಪಾಧ್ಯಕ್ಷರಾದ ರಾಘವೇಂದ್ರ ಹೊಂಗಲ ಮತ್ತು ಪರಶುರಾಮ ಕಾಕತಿ ಹಾಗೂ ಪ್ರಭಾಕರ ಕಿಲ್ಲೇಕರ್, ವಿಠ್ಠಲ ಬೋಜಗಾರ್ ಮತ್ತು ವಿನಾಯಕ ಮೋರೆ ಉಪಸ್ಥಿತರಿದ್ದರು.

Tags:

error: Content is protected !!