Belagavi

ಬೆಳಗಾವಿಯಲ್ಲಿ ಅಕ್ಟೋಬರ್ 25 ರಂದು ‘ಸಶಕ್ತ ಕರ್ನಾಟಕ ರನ್’: ಸುವರ್ಣ ವಿಧಾನಸೌಧದಿಂದ ಮ್ಯಾರಥಾನ್ ಆರಂಭ; ಡಿಸಿ ಮೊಹ್ಮದ್ ರೋಷನ್

Share

ಬೆಳಗಾವಿಯಲ್ಲಿ ಅಕ್ಟೋಬರ್ 25 ರಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಶಕ್ತ ಕರ್ನಾಟಕ ರನ್’ ಮ್ಯಾರಥಾನ್ ಅದ್ಧೂರಿಯಾಗಿ ಜರುಗಲಿದೆ. ಐತಿಹಾಸಿಕ ಸುವರ್ಣ ವಿಧಾನಸೌಧದಿಂದ ಆರಂಭವಾಗಲಿರುವ ಈ ಬೃಹತ್ ಕ್ರೀಡಾಕೂಟದಲ್ಲಿ ಮೂರು ವಿಭಾಗಗಳಿದ್ದು, ಮೂರು ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಹೇಳಿದರು.

ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಶಕ್ತ ಕರ್ನಾಟಕ’ ಕಾರ್ಯಕ್ರಮದಡಿ, ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ‘ಜೆಜೆ ಆಕ್ಟಿವ್’ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಮ್ಯಾರಥಾನ್ ಆಯೋಜಿಸಲಾಗಿದೆ. ಅಕ್ಟೋಬರ್ 25, 2026 ರಂದು ನಡೆಯುವ ಈ ಕ್ರೀಡಾಕೂಟದಲ್ಲಿ 5 ಕಿ.ಮೀ., 10 ಕಿ.ಮೀ. ಮತ್ತು 21 ಕಿ.ಮೀ. (ಹಾಫ್ ಮ್ಯಾರಥಾನ್) ಎಂಬ ಪ್ರಮುಖ ಮೂರು ವಿಭಾಗಗಳಿರಲಿವೆ. ಎಲ್ಲಾ ರನ್ಸ್‌ಗಳು ಐತಿಹಾಸಿಕ ಸುವರ್ಣ ವಿಧಾನಸೌಧದಿಂದ ಆರಂಭವಾಗಿ ವಿವಿಧ ಮಾರ್ಗಗಳಲ್ಲಿ ಸಾಗಿ ವಾಪಸಾಗಲಿವೆ ಎಂದರು.

ಇನ್ನು ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ರನ್ನಿಂಗ್ ಕಲ್ಚರ್ ಅತ್ಯಂತ ಚುರುಕಾಗಿ ಬೆಳೆಯುತ್ತಿದ್ದು, ಜನತೆಯಲ್ಲಿ ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವ ಹಾಗೂ ಸಮಾಜದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ರನ್ನಿಂಗ್ ಕ್ಲಬ್‌ಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಓಟಗಾರರು ಕೂಡ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಸ್ಪರ್ಧಾಳುಗಳಿಗೆ ಪೊಲೀಸ್ ಭದ್ರತೆ, ಆರೋಗ್ಯ ಸೌಲಭ್ಯ ಹಾಗೂ ಹೈಡ್ರೇಶನ್ ಪಾಯಿಂಟ್‌ಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದ ಎಂದರು.

Tags:

error: Content is protected !!