Belagavi

ಕೆಫೆ ತೆರೆದ ಸ್ನೇಹಿತನ ಮೇಲೆಯೇ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು!!!!

Share

ಬೆಳಗಾವಿಯ ರೇಸ್ ಕೋರ್ಸ್ ರಸ್ತೆಯ ಕೆಫೆಯೊಂದರಲ್ಲಿ ಮಾಲೀಕನ ಮೇಲೆ ಮುಸುಕುಧಾರಿಗಳಿಂದ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವು ಇಡೀ ನಗರದಲ್ಲಿ ತೀವ್ರ ಆತಂಕ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಖಂಡಿಸಿ ಮೃತನ ಸಂಬಂಧಿಕರು ಮತ್ತು ಸ್ಥಳೀಯರು ಎಪಿಎಂಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಉದ್ವಿಗ್ನ ಪ್ರತಿಭಟನೆ ನಡೆಸಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತೆ ಬಲವಾಗಿ ಆಗ್ರಹಿಸಿದ್ದಾರೆ.
ಬೆಳಗಾವಿಯ ಟಿವಿ ಸೆಂಟರ್ ಬಳಿಯ ಹೊಸದಾಗಿ ತೆರೆದ ಕೆಫೆಯೊಳಗೆ ರಾತ್ರಿ ಸುಮಾರು 10:30 ರ ಸುಮಾರಿಗೆ ಕತ್ತಿಗಳೊಂದಿಗೆ ನುಗ್ಗಿದ 20 ರಿಂದ 25 ಜನರ ದುಷ್ಕರ್ಮಿಗಳ ಗುಂಪು, ಕೈಫ್ ಶೇರ್‌ಖಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದೆ. ಕೈಫ್ ಅವರ ಬಾಲ್ಯದ ಸ್ನೇಹಿತರೇ ಈ ಕೃತ್ಯದ ಹಿಂದೆ ಇದ್ದು, ವ್ಯವಹಾರಿಕ ಬೆಳವಣಿಗೆಯ ಅಸೂಯೆ ಹಾಗೂ ಹಣಕ್ಕಾಗಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಅರ್ಮಾನ್, ಶಮ್ಯಾ ಹಾಗೂ ಮಾಯಾ ಸೇರಿದಂತೆ ಪ್ರಮುಖರ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯವಾಗಿ ಸಕ್ರಿಯವಾಗಿರುವ ರೌಡಿ ಹಾಗೂ ಮಾದಕ ದ್ರವ್ಯ ಸೇವಿಸುವ ಗ್ಯಾಂಗ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೆಫೆ ಮಾಲೀಕ ಮೊಹ್ಮದ್ ಕೈಫ್ ಶೇರಖಾನ್ ಒತ್ತಾಯಿಸಿದ್ದಾರೆ.

ಹೊಸದಾಗಿ ತೆರೆದ ಕೆಫೆಯ ಮೇಲೆ ಮುಸುಕುಧರಿಸಿ ಕತ್ತಿಗಳೊಂದಿಗೆ ನುಗ್ಗಿದ 20 ರಿಂದ 25 ಜನರ ಗುಂಪು ದಾಳಿ ನಡೆಸಿದೆ. ಸ್ಥಳೀಯ ರೌಡಿಸಂ,ಕಾನೂನುಬಾಹಿರ
ಚಟುವಟಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವ ಗ್ಯಾಂಗ್‌ಗಳ ಈ
ದುಷ್ಕೃತ್ಯವು ಜನತೆಯಲ್ಲಿ ಭೀತಿಯನ್ನುಂಟು ಮಾಡಿದೆ. ಇಂತಹ ಹಿಂಸಾತ್ಮಕ ಅಪರಾಧ ಚಟುವಟಿಕೆಗಳಿಗೆ
ಬ್ರೇಕ್ ಹಾಕಲು ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಯುವ ನಾಯಕ ಜುನೈದ್
ಪಾಶಾ ಹಾಗೂ ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ.

ಘಟನೆಯನ್ನು ಖಂಡಿಸಿ ಅಜಮ್ ನಗರದ ನಿವಾಸಿಗಳು ಹಾಗೂ ಸಂಬಂಧಿಕರು ಎಪಿಎಂಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ನಾರಾಯಣ ಬರಮಣಿ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಆಕ್ರೋಶಗೊಂಡ ಜನರಿಗೆ ಧೈರ್ಯತುಂಬಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Tags:

error: Content is protected !!