Belagavi

ಬೆಳಗಾವಿಯ ಕಸಾಯಿ ಗಲ್ಲಿ ಮತ್ತು ಕಾಮತ್ ಗಲ್ಲಿಯಲ್ಲಿ ಶ್ರದ್ಧಾ-ಭಕ್ತಿಯ ನವರಾತ್ರ್ಯೋತ್ಸವ

Share

ಬೆಳಗಾವಿಯ ಐತಿಹಾಸಿಕ ಕಸಾಯಿ ಗಲ್ಲಿ ಹಾಗೂ ಕಾಮತ್ ಗಲ್ಲಿಯಲ್ಲಿ ನವರಾತ್ರಿ ಮಹೋತ್ಸವದ ಸಂಭ್ರಮ ಕಳೆಕಟ್ಟಿದೆ. ದಸರಾ ಹಬ್ಬದ ವಿಶೇಷ ಹಿನ್ನೆಲೆಯಲ್ಲಿ ಪುಟಾಣಿ ಮಕ್ಕಳನ್ನು ಕರೆದೊಯ್ದು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೀಪಕ್ಕೆ ಎಣ್ಣೆ ಹಾಕುವ ಹಳೆಯ ಪರಂಪರೆಯನ್ನು ಇಲ್ಲಿನ ಯುವ ಪೀಳಿಗೆ ಅತ್ಯಂತ ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.

ಬೆಳಗಾವಿಯ ಕಸಾಯಿ ಗಲ್ಲಿಯ ಶ್ರೀ ಮಾತಂಗಿ ಮಂದಿರ ಹಾಗೂ ಕಾಮತ್ ಗಲ್ಲಿಯ ಲಕ್ಷ್ಮೀ ದೇವಸ್ಥಾನದ ಸನ್ನಿಧಿಯಲ್ಲಿ ಪ್ರತಿವರ್ಷ ದಸರಾ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ತಂಗಿನಕೆರಿ ಗಲ್ಲಿ, ಮಾಳಿ ಗಲ್ಲಿ, ಕಾಮತ್ ಗಲ್ಲಿ ಮತ್ತು ಕಸಾಯಿ ಗಲ್ಲಿಯ ಸುತ್ತಮುತ್ತಲಿನ ಪುಟಾಣಿ ಮಕ್ಕಳು ಈ ಸಂಪ್ರದಾಯದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಹಲವು ವರ್ಷಗಳಿಂದ ಬಂಡೂ ಶಹಾಪುರಕರ್ ಅವರು ಮುಂಚೂಣಿಯಲ್ಲಿ ನಿಂತು ಈ ಮಕ್ಕಳನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ, ‘ದೀಪಕ್ಕೆ ಎಣ್ಣೆ ಹಾಕುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ನಂತರ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುತ್ತಿದ್ದಾರೆ.

ಗಲ್ಲಿಯ ಯುವತಿಯರು ಮತ್ತು ಪುಟಾಣಿ ಮಕ್ಕಳು ನವರಾತ್ರಿ ಉತ್ಸವದಲ್ಲಿ ಅತ್ಯಂತ ಸಡಗರದಿಂದ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿದಿನ ಸಂಜೆ 7:30 ರಿಂದ ರಾತ್ರಿ 9:00 ಗಂಟೆಯವರೆಗೆ ನಡೆಯುವ ವಿಶೇಷ ಆರತಿ ಕಾರ್ಯಕ್ರಮದಲ್ಲಿ ಸುಮಾರು 150 ರಿಂದ 200ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಹಿರಿಯರ, ಅಪ್ಪ-ಅಮ್ಮಂದಿರ ಕಾಲದಿಂದ ನಡೆದುಕೊಂಡು ಬಂದಿರುವ ಈ ಸುಂದರ ಸಂಪ್ರದಾಯವನ್ನು ಇಂದಿನ ಯುವ ಪೀಳಿಗೆಯೂ ಅಷ್ಟೇ ಶ್ರದ್ಧೆಯಿಂದ ಮುಂದುವರಿಸಿದೆ.

ಈ ಧಾರ್ಮಿಕ ಕಾರ್ಯಕ್ರಮದ ವಿಶೇಷತೆಯೆಂದರೆ ಕೇವಲ ಮಕ್ಕಳಷ್ಟೇ ಅಲ್ಲದೆ, ಅವರ ತಾಯಂದಿರು, ಅಕ್ಕಂದಿರು ಹಾಗೂ ಹಿರಿಯರೆಲ್ಲರೂ ಒಂದೆಡೆ ಸೇರಿ ಪರಸ್ಪರ ಸಹಕರಿಸುತ್ತಿದ್ದಾರೆ. ಗಲ್ಲಿಯ ಎಲ್ಲಾ ಹಿರಿಯರು, ಕಿರಿಯ ಯುವಕರು ಮತ್ತು ಗಣ್ಯರ ವಿಶೇಷ ಸಹಕಾರದಿಂದ ಉತ್ಸವವು ಕಳೆಕಟ್ಟಿದೆ.

Tags:

error: Content is protected !!