ಝೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಕಾರೆಲ್ ಹಾವ್ಲಿಕ್ ಅವರ ನೇತೃತ್ವದ ನಿಯೋಗವು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ಡಿಸಿಎಂ ಜಿ ಪರಮೇಶ್ವರ, ಸಚಿವ ಎಂ ಬಿ ಪಾಟೀಲ್, ಸಂಸದ ಹಾಗೂ ಸಿಎಂ ಮುಖ್ಯ ಸಲಹೆಗಾರ ಡಾ ಜಿ ಸಿ ಚಂದ್ರಶೇಖರ್, ನಿಯೋಗದ ಪ್ರತಿನಿಧಿಗಳಾದ ಝೆಕ್ ಗಣರಾಜ್ಯದ ವಿದೇಶಾಂಗ ಸಚಿವೆ ಮರಿಯಾ ಚಟರ್ಡೋವ, ಮಾರೆಟ್ ಲಿಬ್ರರ್ಕಿ, ಕ್ಯಾತರಿನ ಗಜುರ್ನೋವಾ, ರಿಚರ್ಡ್ ಲಾವರ್ಟಿ, ಮಿರೋಸ್ಲಾವ್ ಒಕ್ರೂಲಿ, ಕ್ಯಾತರಿನ ಪೀಟರ್ಸನ್, ಕ್ಯಾತರಿನ ವವ್ಕೊವಾ, ಜನ್ ರಾಫಾಜ್, ಗುನ್ನತ್ ಚೌಧರಿ, ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.

