Belagavi

ಬೆಳಗಾವಿ: ಸಂಜೀವಿನಿ ಫೌಂಡೇಶನ್‌ ವತಿಯಿಂದ ಸಾಧಕ ಹಿರಿಯ ನಾಗರಿಕರಿಗೆ ಸನ್ಮಾನ!

Share

ಬೆಳಗಾವಿಯ ಜಿ.ಜಿ. ಚಿಟ್ನಿಸ್ ಸ್ಕೂಲ್‌ನಲ್ಲಿ ಸಂಜೀವಿನಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅರ್ಥಪೂರ್ಣ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸಲಾಯಿತು. ಶಿರೀಷ್ ಗೋಗಟೆ, ಸುನೀಲ್‌ಕುಮಾರ್ ಆಪ್ಟೇಕರ್ ಹಾಗೂ ದೀಪಕ್ ಪವಾರ್ ಅವರಿಗೆ ‘ಸಂಜೀವಿನಿ ಜ್ಯೇಷ್ಠ ನಾಗರಿಕ ಪ್ರಶಸ್ತಿ’ ನೀಡಿ ಸತ್ಕರಿಸಲಾಯಿತು.

ಬೆಳಗಾವಿಯ ಜಿ.ಜಿ. ಚಿಟ್ನಿಸ್ ಸ್ಕೂಲ್‌ನಲ್ಲಿ ಸಂಜೀವಿನಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಜ್ಯೇಷ್ಠ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭವು ಅತಿಥಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಸಂಸ್ಥಾಪಕಿ ಡಾ. ಸವಿತಾ ದೇಗಿನಾಳ ಅವರ ಪ್ರಾಸ್ತಾವಿಕ ನುಡಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಸಮಾಜಕ್ಕೆ ಮಾದರಿಯಾಗಿ ನಿಂತಿರುವ ಶಿರೀಷ್ ಗೋಗಟೆ, ಖ್ಯಾತ ದೇಹದಾರ್ಢ್ಯಪಟು ಸುನೀಲ್‌ಕುಮಾರ್ ಆಪ್ಟೇಕರ್ ಮತ್ತು ಸಮಾಜ ಸೇವಕ ದೀಪಕ್ ಪವಾರ್ ಅವರಿಗೆ ಶಾಲಾ-ಹೊದಿಸಿ, ಸ್ಮೃತಿಚಿಹ್ನೆ ನೀಡಿ ಗೌರವಿಸಲಾಯಿತು. ಸತ್ಕಾರ ಸ್ವೀಕರಿಸಿ ಮಾತನಾಡಿದ ಸಾಧಕರು ತಮ್ಮ ಜೀವನದ ಸ್ಮರಣೀಯ ಕ್ಷಣಗಳು ಹಾಗೂ ಹಾದಿ ಬಂದ ಹಾದಿಯನ್ನು ಮೆಲುಕುಹಾಕಿ ಯುವಜನತೆಗೆ ಸ್ಪೂರ್ತಿಯ ಸಂದೇಶ ನೀಡಿದರು. ಅತಿಥಿಯಾಗಿ ಆಗಮಿಸಿದ್ದ ಹಿರಿಯ ವಕೀಲ ಅಡ್ವೋಕೇಟ್ ಚಂದ್ರಹಾಸ್ ಅಣೇಕರ್ ಫೌಂಡೇಶನ್‌ನ ಈ ಶ್ಲಾಘನೀಯ ಕಾರ್ಯವನ್ನು ಕೊಂಡಾಡಿದರು. ಸಮಾರಂಭದಲ್ಲಿ ಸಂಚಾಲಕರು, ಸಂಘಟಕರು ಹಾಗೂ ನೂರಾರು ಆಮಂತ್ರಿತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!