Belagavi

ಸುಳಗಾದಲ್ಲಿ ಮ್ಯಾಗ್ನೀಸ್ ತುಂಬಿದ 16 ಚಕ್ರಗಳ ಬೃಹತ್ ಟ್ರಕ್ ಪಲ್ಟಿ: ಬೆಳಗಾವಿ-ಬೆಳಗುಂದಿ ರಸ್ತೆ ಬಂದ್!

Share

ಬೆಳಗಾವಿ ತಾಲ್ಲೂಕಿನ ಸುಳಗಾ (ಉಚಗಾಂವ) ಗ್ರಾಮದ ಮಧುರಾ ಹೋಟೆಲ್ ಹತ್ತಿರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮ್ಯಾಗ್ನೀಸ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಚಾಲಕನ ನಿರ್ಲಕ್ಷ್ಯ ಹಾಗೂ ನಿದ್ರೆಯ ಮಂಪರಿನಿಂದ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.

ಬೆಳಗಾವಿ ತಾಲ್ಲೂಕಿನ ಸುಳಗಾ ಉಚಗಾಂವ ಗ್ರಾಮದ ಮಧುರಾ ಹೋಟೆಲ್ ಹತ್ತಿರ ಬೆಳಗುಂಡಿಡೆಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ 16 ಚಕ್ರಗಳ ಬೃಹತ್ ಮ್ಯಾಗ್ನೀಸ್ ಲಾರಿ ಮುಂಜಾನೆ 5:00 ಗಂಟೆಯ ಸುಮಾರಿಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆ ಕಿರಿದಾಗಿದ್ದು ಚಾಲಕನಿಗೆ ಸರಿಯಾದ ಅಂದಾಜು ಸಿಗದ ಕಾರಣ ಮತ್ತು ಚಾಲಕನಿಗೆ ನಿದ್ರೆ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಪಿ (AP) ನೋಂದಣಿಯಿರುವ ಈ ಟ್ರಕ್ ಚಾಲನೆಯಲ್ಲಿದ್ದಾಗ ರಸ್ತೆ ಪಕ್ಕದ ಮಾವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮರವು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಸದ್ಯ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸ್ಥಳಕ್ಕೆ ಬೆಳಗಾವಿ ಗ್ರಾಮಾಂತರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:

error: Content is protected !!